logo
WhatsApp Image 2026-04-02 at 14.46.04.jpeg
hindalco everlast.jpeg

ಬೆಳ್ಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ

ಟ್ರೆಂಡಿಂಗ್
share whatsappshare facebookshare telegram
14 Mar 2023
post image

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ ಉಡುಪಿ ತಾಲೂಕು ಅಧ್ಯಕ್ಷ ಅರಾ ಪ್ರಭಾಕರ್ ರಾಜ್ ಪೂಜಾರಿ ನೇತೃತ್ವದಲ್ಲಿ ನಡೆಯಿತು ಮಾಜಿ ಸೈನಿಕ ಸುಂದರ್ ಬಂಗೇರ ಇವರನ್ನು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಮಮತಾ ಪ್ರಭಾಕರ್ ಬ್ರಹ್ಮಾವರ ತಾಲೂಕು ಮಾಜಿ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಹಾಗೂ ಜಿಲ್ಲಾ ಪದಾದಿಕಾರಿಗಳು ಹಾಜರಿದ್ದರು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಲಹೆಗಾರ ಲಕ್ಷ್ಮೀಶ್ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ ಹಾಗೂ ಉಮೇಶ್ ಶೆಟ್ಟಿ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ಶೆಟ್ಟಿ , ಕಾರ್ಮಿಕ ಘಟಕದ ಅಧ್ಯಕ್ಷ ದೇವರಾಜ್ ಎಂ ಬಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುಧೀರ್ ಭಂಡಾರಿ ಹಾಗೂ ವೀರೇಶ್ ಪಿಕೆ ಅವರು ಉಡುಪಿ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಮಹಿಳಾ ಉಪಾಧ್ಯಕ್ಷರಾಗಿ ಹೆಲನ್ ಸೋನ್ಸ್ ಹಾಗೂ ಪವಿತ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕಿರಣ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ರೋಹಿಣಿ ಅಮೀನ್ ಆಯ್ಕೆಯಾದರು. ನರಸಿಂಹ ಆಚಾರ್ಯ ಹೆಬ್ರಿ ರತ್ನಾಕರ್ ಪೊಟ್ಟುಕೆರೆ ಮೀನಾಕ್ಷಿ ನೂತನ ಸದಸ್ಯರಾಗಿ ಸೇರ್ಪಡೆಯಾದರು. ಸುಲತಾ ಪ್ರಾರ್ಥಿಸಿದರು. ಅವಿನಾಶ್ ಸ್ವಾಗತಿಸಿ ಅನುಷಾ ಆಚಾರ್ಯ ಪಳ್ಳಿ ಕಾರ್ಯಕ್ರಮ ನಿರೂಪಿಸಿದರು

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.