



ಹೆಬ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ರಿ ಮತ್ತು ಬೈಂದೂರು ತಾಲೂಕಿನ ಅಧ್ಯಕ್ಷರನ್ನಾಗಿ ಪರಿಪತ್ತಿನ ಮತದಾರರಲ್ಲದವರನ್ನು ನೇಮಕ ಮಾಡಲಾಗಿದ್ದು, ತನ್ನ ಬೆಂಬಲಿಗರೇ ಬೇಕು ಎನ್ನುವ ಹಠದಲ್ಲಿ ಪರಮಾಧಿಕಾರದ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ಒಡಕು ಮೂಡುಸುವ ಜಿಲ್ಲಾಧ್ಯಕ್ಷರ ನಿರ್ಧಾರ ಸರಿಯಲ್ಲ ಎಂದು ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಹೆಬ್ರಿಯ ಎಚ್. ರಾಜೀವ ಶೆಟ್ಟಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಜಿಲ್ಲಾಧ್ಯಕ್ಷರಿಗೆ ಹೆಬ್ರಿ ತಾಲೂಕಿನಲ್ಲಿ ಚಲಾವಣೆಯಾದ 97 ಮತಗಳಲ್ಲಿ ಕೇವಲ 21 ಮತಗಳು ದೊರೆತಿದ್ದು. ಕೇವಲ ಪ್ರತಿಷ್ಠೆಗೆ ಬಿದ್ದು ಬೆಂಬಲಿಗರಿಗೆ ಅವಕಾಶವನ್ನು ನೀಡುವ ಏಕೈಕ ಕಾರಣಕ್ಕಾಗಿ ಹೆಬ್ರಿಯ ಕಸಾಪ ದಲ್ಲಿ ಸದಸ್ಯರಲ್ಲಿ ಅಸಮಾಧಾನದ ಜೊತೆಗೆ ಬಣಗಳು ತಾರಕ್ಕೇರಲು ಜಿಲ್ಲಾಧ್ಯಕ್ಷರೇ ಕಾರಣರಾಗಿದ್ದಾರೆ. ಕಸಾಪದ ಸರ್ವ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ನಾಮಕಾವಸ್ಥೆಗಾಗಿ ಹೆಬ್ರಿಯಲ್ಲಿ ಎರಡು ಸಭೆ ಕರೆದು ಯಾವೂದೇ ನಿರ್ದಾರ ಕೈಗೊಳ್ಳದೆ ಸಭೆಯ ಅರ್ಧದಲ್ಲಿ ರದ್ದು ಆಗಿದೆ ಎಂದು ರಾಜೀವ ಶೆಟ್ಟಿ ಹೇಳಿದರು.
ಯಾರೂ ಅಧ್ಯಕ್ಷರಾಗಬೇಕು ಎಂದು ಹೆಬ್ರಿಯ ಸಭೆಯಲ್ಲಿ ಕೇಳಿ ಹಲವು ಹೆಸರುಗಳು ಪ್ರಸ್ತಾಪವಾದ ಬಳಿಕ ಹೆಬ್ರಿ ತಾಲೂಕಿನ ಕೇವಲ 21 ಸದಸ್ಯರ ಬೆಂಬಲದಲ್ಲಿ ಉಡುಪಿಯ ಹೊಟೇಲಿನಲ್ಲಿ ಗುಪ್ತ ಸಭೆ ನಡೆಸಿ ಅವರಿಗೆ ಬೇಕಾದವರನ್ನೇ ಘೋಷಿಸಿದ್ದಾರೆ ಎಂದು ರಾಜೀವ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತೀವ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧ್ಯಕ್ಷರ ನಿರ್ಧಾರಕ್ಕೆ ಹೆಬ್ರಿ ತಾಲೂಕಿನ 80ಕ್ಕೂ ಹೆಚ್ಚು ಸದಸ್ಯರ ತೀವ್ರವಾದ ಆಕ್ಷೇಪವಿದ್ದು ರಾಜ್ಯ ಘಟಕದ ಅಧ್ಯಕ್ಷರಿಗೂ ಮನವಿ ಮಾಡಲಾಗುತ್ತದೆ ಎಂದು ಹೇಳಿದ ರಾಜೀವ ಶೆಟ್ಟಿ ಜಿಲ್ಲಾಧ್ಯಕ್ಷರು ಚುನಾವಣೆಗೆ ಸ್ಪರ್ಧಿಸುವಾಗ "ನಾನೀಗ ಶಿಕ್ಷಕ ವೃತ್ತಿಯಿಂದ ನಿವೃತ್ತನಾಗುತ್ತಿದ್ದೇನೆ, ನನಗೆ ಮುಂದೆ ಬಿಡುವು ಇದೆ, ಸಾಹಿತ್ಯದ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈಗ ತಾಲೂಕು ಘಟಕಗಳಿಗೆ ನೇಮಕ ಮಾಡುವಾಗ ಸಾಹಿತ್ಯ ಸೇವೆ ಸಮಯ ನೀಡಲು ಪುರುಸೋತ್ತು ಇಲ್ಲದ ಶಿಕ್ಷಕರ ಸಹಿತ ಸರ್ಕಾರಿ ನೌಕರರನ್ನೇ ನೇಮಿಸುತ್ತಿದ್ದಾರೆ. ಸಾಹಿತ್ಯ ಸೇವೆಗಾಗಿ ಆವಕಾಶ ಬಯಸುವ ಇತರರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಸರಸ್ವತಿಯ ಸೇವೆ ಮಾಡುವ ಅವಕಾಶವನ್ನು ನೀಡಿ ಜಿಲ್ಲಾಧ್ಯಕ್ಷರು ನುಡಿದಂತೆ ನಡೆಯಲಿ ಎಂದು ಹೆಬ್ರಿಯ ರಾಜೀವ ಶೆಟ್ಟಿ ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.