



ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದಗಿರಿ ತಾಂಡ ಗ್ರಾಮದಲ್ಲಿ ಗೋಪ್ಯಾನಾಯ್ಕ ಎಂಬುವರಿಗೆ ಸೇರಿದ ಅಂಗಡಿಯಲ್ಲಿದ್ದ ಪ್ರಿಜ್ ವಿದ್ಯುತ್ ಸರಬರಾಜಿನಲ್ಲಾದ ಏರುಪೇರಿನಿಂದ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದ ಸಾವು- ನೋವು ಸಂಭವಿಸಿಲ್ಲ.
ಸೆ 7ರಂದು ರಾತ್ರಿ9 ಗಂಟೆಯಲ್ಲಿ ವಿದ್ಯುತ್ ಸರಬರಾಜಿಲ್ಲಾದ ಏರುಪೇರಿನಿಂದಾಗಿ ಪ್ರಿಜ್ ಬ್ಲಾಸ್ಟ್ ಆಗಿದೆ. ಪ್ರಿಜ್ ಬ್ಲಾಸ್ಟ್ ಆದ ಪರಿಣಾಮ ಮೇಲ್ಚಾವಣೆ ಕಿತ್ತಿದ್ದು ಬೆಂಕಿ ಹೊತ್ತಿ ಉರಿದ
ಪರಿಣಾಮ ದುಬಾರಿ ಬೆಲೆಯ ಪೀಠೋಪಕರಣಗಳು ಹಾಗೂ 30 ಸಾವಿರ ನಗದು ಹಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಹತ್ತಿರದಲ್ಲಿ ಯಾರು ಇಲ್ಲದ್ದರಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ದುಬಾರಿ ಬೆಲೆಯ ಪೀಠೋಪಕರಣಗಳು ಹಾಗೂ ಪ್ರಿಜ್ ಸಂಪೂರ್ಣ ಭಸ್ಮಗೊಂಡಿದ್ದು. ವಿಷಯ ತಿಳಿದ ಕೂಡಲೇ ಜಾಗ್ರತರಾದ ಅಕ್ಕಪಕ್ಕದವರು ಹಾಗೂ ಗ್ರಾಮಸ್ಥರು, ಸಮಯ ಪ್ರಜ್ಞೆ ಮೆರದಿದ್ದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪ್ರಿಜ್
ಬ್ಲಾಸ್ಟ್ ನಿಂದಾಗಿ ಬೆಂಕಿ ಹೊತ್ತಿ ಹುರಿದಿರುವುದರಿಂದಾಗಿ ನಗದು ಹಣ ಸೇರಿದಂತೆ ದುಭಾರಿ ಪೀಟೋಪಕರಣಗಳು ಸುಟ್ಟು ಕರಕಲಾಗಿದ್ದು ಒಟ್ಟು 1 ಲಕ್ಷಕ್ಕೂ ಅಧಿಕ ನಷ್ಟ ವಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.