



ಭಾರತೀಯರು ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಡುವ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅನ್ನು ಪ್ರಧಾನಿ ಮೋದಿ ರಾಷ್ಟ್ರವ್ಯಾಪಿ ಇಂದು ಚಾಲನೆ ನೀಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
ಆರೋಗ್ಯ ಗುರುತಿನ ಚೀಟಿ ಎಂದರೇನು? ಆರೋಗ್ಯ ಐಡಿ ಏಕೆ ಅವಶ್ಯಕ? ಆರೋಗ್ಯ ಐಡಿಯನ್ನು 14 ಅಂಕಿಗಳಿಂದ ಜನರೇಟ್ ಮಾಡಲಾಗುತ್ತದೆ. ಈ ಸಂಖ್ಯೆ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ದಾಖಲಿಸಲಾಗುತ್ತದೆ. ಆರೋಗ್ಯ ಐಡಿಯನ್ನು ಬಳಸುವುದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಪಡೆಯುವ ಮೊದಲ ಹೆಜ್ಜೆಯಾಗಿದೆ. ನಿಮ್ಮ ಒಪ್ಪಿಗೆಯ ಮೇರೆಗೆ ನಿಮ್ಮ ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಪಡೆಯಲು ಸಹಾಯವಾಗುತ್ತದೆ.
ಆರೋಗ್ಯ ಐಡಿಯನ್ನು ಪಡೆಯುವುದು ಹೇಗೆ? ನೀವು ಹೆಲ್ತ್ ಐಡಿ ವೆಬ್ ಪೋರ್ಟಲ್ ನಲ್ಲಿ ಸ್ವಯಂ ನೋಂದಣಿಯ ಮೂಲಕ ಅಥವಾ ಗೂಗಲ್ ಪ್ಲೇಸ್ಟೋರ್ ನಲ್ಲಿ ಎಬಿಡಿಎಂ (ABDM) ಹೆಲ್ತ್ ರೆಕಾರ್ಡ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ಆರೋಗ್ಯ ಐಡಿಯನ್ನು ಪಡೆಯಬಹುದು. ಇಲ್ಲಿ ನೀವು ABDM ಆರೊಗ್ಯ ಐಡಿಯನ್ನು ನೋಂದಾಯಿಸಬಹುದು ಅಥವಾ ಮೊಬೈಲ್ ಅಪ್ಲಿಕೇಶನ್‌ಅನ್ನು ಡೌನ್ ಲೋಡ್ ಮಾಡಬಹುದು. ಭಾರತದಾದ್ಯಂತ ಸಾರ್ವಜನಿಕ/ ಖಾಸಗಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಒಳಗೊಂಡಂತೆ ಆರೋಗ್ಯ ಸೌಲಭ್ಯ ನೀಡುವ ಕಡೆ ಆರೋಗ್ಯ ಐಡಿಯನ್ನು ರಚಿಸಲು ಅವಕಾಶವಿದೆ. ಮೊಬೈಲ್ ನಂಬರ್ ಮೂಲಕ ಆರೋಗ್ಯ ಐಡಿ: ಹೆಸರು, ಹುಟ್ಟಿದ ವರ್ಷ, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ ಗೊತ್ತಿರಬೇಕು. ಬೇಕಾಗುವ ಮಾಹಿತಿ ಗಳು; ಆಧಾರ್ ಮೂಲಕ ಆರೋಗ್ಯ ಐಡಿ: ಹೆಸರು, ಹುಟ್ಟಿದ ವರ್ಷ, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ನಿಮ್ಮ ಪಾಸ್ವರ್ಡ್ ಮರೆತರೆ ಮಾಡಬೇಕಾದದ್ದೇನು? ನಿಮ್ಮ ಆರೋಗ್ಯ ಐಡಿಗೆ ಮೊಬೈಲ್ ಒಟಿಪಿ ಅಥವಾ ಆಧಾರ್ ಲಿಂಕ್ ಮಾಡಿದ ಮೊಬೈಲ್ ಒಟಿಪಿ ಮೂಲಕ ಲಾಗಿನ್ ಆಗಿ. ನಂತರ ಹೊಸ ಪಾಸ್ವರ್ಡ್‌ಅನ್ನು ಅನ್ವಯಿಸಬಹುದು. ಸಮಸ್ಯೆಗಳು ಎದುರಾದರೆ, ndhm@nha.gov.in ನಲ್ಲಿ ಸಂಪರ್ಕಿಸಿ ಅಥವಾ - 1800-11-4477 / 14477 ಈ ಸಂಖ್ಯೆಗೆ ಕರೆ ಮಾಡಿ.
ಪಾಸ್ವರ್ಡ್ ಮೂಲಕ ನಿಮ್ಮ ಆರೋಗ್ಯ ಐಡಿ ಖಾತೆಯಿಂದ ನೀವು ಲಾಕ್ ಆಗಿದ್ದರೆ, ಲಾಗಿನ್ ಮಾಡಲು ನೀವು ದೃಢೀಕರಣ ವಿಧಾನಗಳನ್ನು ಪ್ರಯತ್ನಿಸಬಹುದು. ಮೂರು ಬಾರಿಯೂ ಪ್ರಯತ್ನಿಸಿದ ಬಳಿಕವೂ ತಪ್ಪುಗಳಾಗಿದ್ದರೆ ದೃಢೀಕರಣ ವಿಧಾನ 12 ಗಂಟೆಗಳ ಕಾಲ ನಿಷ್ಕ್ರಿಯಗೊಳ್ಳುತ್ತದೆ. ಬಳಕೆದಾರರು ತಮ್ಮ ಆರೋಗ್ಯ ಐಡಿಯನ್ನು ಶಾಶ್ವತವಾಗಿ ಅಳಿಸಬಹುದು ಅಥವಾ ತಾತ್ಕಾಲಿಕವಾಗಿ ನಿಷ್ಕ್ರಿಯೆಗೊಳಿಸಬಹುದು. ನಿಷ್ಕ್ರಿಯೆಗೊಳಿಸಿದ ಬಳಿಕ ಪುನಃ ಆರೋಗ್ಯ ಐಡಿಯನ್ನು ಸಕ್ರಿಯೆಗೊಳಿಸಲು ಆಯ್ಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ? ಅಧಿಕೃತ ವೆಬ್ ಸೈಟ್ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಆಯ್ಕೆ ಮಾಡಿ. https://nha.gov.in/
*NDHM ID ಆಯಪ್ ತೆರೆಯಿರಿ. ನೋಂದಣಿ ಪುಟವು ತೆರೆಯುತ್ತದೆ
*ಹೆಸರು ಮತ್ತು ಫೋನ್ ಸಂಖ್ಯೆಯನ್ನು ಜತೆಗೆ ಕೇಳಿದ ವಿವರಗಳನ್ನು ತುಂಬಿ
*ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
*ಇದೀಗ ಒಟಿಪಿ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುತ್ತದೆ. ಆ ಸಂಖ್ಯೆಯನ್ನು ಟೈಪ್ ಮಾಡಿ.
*ಅರ್ಜಿಯ ಅಂತಿಮ ಸಲ್ಲಿಕೆಗೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.