



ಪುತ್ತೂರು: ಕಬಕ ಸಮೀಪದ ಕೂವೆತ್ತಿಲದಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾಗಿ ವರದಿಯಾಗಿದೆ.
ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಂಜುಶ್ರೀ (20) ಮೃತ ಯುವತಿ. ಕೆಲ ಸಮಯಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಆಲ್ಟೋ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀರ ಗಾಯಗೊಂಡಿದ್ದರು. ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೇ.24ರ ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.