



ಟೋಕಿಯೋ: ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆ ತೈ ಜು ಯಿಂಗ್ ಜೋತೆ ಆಕ್ರಮಣಕಾರಿ ಆಟವಾಡಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ಸ್ ನಲ್ಲಿ ಸೋತಿದ್ದು, ಈ ಮೂಲಕ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈ ತಪ್ಪಿದಂತಾಗಿದೆ. 21-18, 21-12 ನೇರ ಸೆಟ್‍ಗಳಲ್ಲಿ ಪಿ.ವಿ.ಸಿಂಧು ಸೋಲನ್ನು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಪ್ರವೇಶಿಸಿದ್ದಾರೆ.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ಹಿ ಬಿಂಗ್ ಜಿಯಾವೋ ಅವರೊಂದಿಗೆ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.
ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್ ಶಿಪ್ ಮೊದಲಾದ ಪಂದ್ಯಗಳಲ್ಲಿ ಚೈನೀಸ್ ತೈಪೆ ತೈ ಜು ಯಿಂಗ್ ಗೆ ಪಿ.ವಿ.ಸಿಂಧು ಅವರು ಸೋಲಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.