logo
WhatsApp Image 2026-04-02 at 14.46.04.jpeg
hindalco everlast.jpeg

ರಾಧಾ ನಾಯಕ್ ಹಳೆ ವಿದ್ಯಾರ್ಥಿ ಸಂಘ: ಹೊಸ ಕಾರ್ಯಕಾರಿ ಮಂಡಳಿ ಆಯ್ಕೆ: ಗೌರವಾಧ್ಯಕ್ಷರಾಗಿ ದಯಾನಾಯಕ್ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬೈಲು‌ಮನೆ ಸುಧೀರ್ ಶೆಟ್ಟಿ ಅಯ್ಕೆ

ಟ್ರೆಂಡಿಂಗ್
share whatsappshare facebookshare telegram
12 Oct 2025
post image

ಕಾರ್ಕಳ: ರಾಧಾ ನಾಯಕ್ ಹಳೆ ವಿದ್ಯಾರ್ಥಿ ಸಂಘದ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಶಾಲಾ ಮುಖ್ಯೊಪಾಧ್ಯಾಯರಾದ ರಾಮದಾಸ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಅಯ್ಕೆ ಸಮಿತಿಯಲ್ಲಿ ಸಂಘದ ಗೌರವಧ್ಯಕ್ಷರಾಗಿ ನಿವೃತ್ತ ಪೊಲೀಸ್ ಕಮಿಷನರ್ ಮುಂಬೈ ದಯಾ ನಾಯಕ್ ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ (ಬೈಲುಮನೆ, ಎಣ್ಣೆಹೊಳೆ) ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಹೇಶ್ ಕುಲಾಲ್, ಶಂಶಿರ್ (ಎಣ್ಣೆಹೊಳೆ) ಹಾಗೂ ದೀಕ್ಷಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ವಿಜಯ್ ಕುಲಾಲ್ (ಹಟ್ಟೆ) ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ (ಹೆಂಡಿಬೆಟ್ಟು, ಎಣ್ಣೆಹೊಳೆ) ಮತ್ತು ಜೊತೆಗೆ ಕಾರ್ಯದರ್ಶಿಯಾಗಿ ರಂಜಿತ್ ಶೆಟ್ಟಿ (ಚೇಳಿಬೆಟ್ಟು, ಎಣ್ಣೆಹೊಳೆ) ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶರತ್ ಶೆಟ್ಟಿ (ಅರಬ್ಬಿಮನೆ, ಎಣ್ಣೆಹೊಳೆ), ಸಂದೀಪ್ ಕಾಮತ್, ವೀಣಾ ಮತ್ತು ಅಕ್ಷತಾ ಸಂದೀಪ್ ಜೈನ್ ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಗಳಾಗಿ ಸುಕೇಶ್ (ಕೈಕಂಬ), ರವಿ (ಎಣ್ಣೆಹೊಳೆ), ಪ್ರವೀಣ್ ಶೆಟ್ಟಿ (ಕುಮೇರುಮನೆ, ಎಣ್ಣೆಹೊಳೆ) ಮತ್ತು ಪಾವನ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಪರ್ಕ ಕಾರ್ಯದರ್ಶಿಯಾಗಿ ಸಂದೀಪ್ (ಅಮೃತ್ ನಗರ) ನೇಮಕಗೊಂಡಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ರಾಂ ಅಜೆಕಾರು ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ ಪೂಜಾರಿ, ಪ್ರಸಿದ್ದ ಜೈನ್ (ಎಣ್ಣೆಹೊಳೆ), ಜೊತೆಗೆ ದೀಪಕ್ ಮತ್ತು ಭಾರ್ಗವ್ ಆಯ್ಕೆಯಾಗಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.