



ಮಂಗಳೂರು: ಕೇರಳ ಪ್ರವೇಶಿಸಿರುವ ಮುಂಗಾರು ಇಂದು ಕರಾವಳಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ನಡುವೆ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಬಿಪರ್ ಜಾಯ್ ಚಂಡಮಾರುತ ಉತ್ತರಕ್ಕೆ ಚಲಿಸುತ್ತಿದ್ದು, ಶುಕ್ರವಾರ ಸಂಜೆಯ ಅವಧಿಯಲ್ಲಿ ಗೋವಾ ದಕ್ಷಿಣ ಮುಂಬೈನಿಂದ ಸುಮಾರು 750 ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತಗೊಂಡಿದ್ದು, ಮುಂದಕ್ಕೆ ಚಲಿಸುತ್ತಿದೆ.
ಚಂಡಮಾರುತ ಕರಾವಳಿಯಿಂದ ಬಹುದೂರ ಸಾಗಿದ್ದರೂ ಅದರ ಪ್ರಭಾವ, ಪ್ರಕ್ಷುಬ್ದತೆ ಮುಂದುವರಿದಿದೆ.
ಜೂ.14ರವರೆಗೂ ಹೀಗೆ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂ.13ರವರೆಗೆ ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲಲ್ಲಿ ಉತ್ತಮ ಮಳೆ ನೀರಿಕ್ಷೆಯಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.