logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹೆಬ್ರಿ ಅಮೃತಭಾರತಿ ಮಾತೃಭಾರತಿಯ ಮಾತೆಯರಿಂದ ರಾಮನವಮಿ ಆಚರಣೆ

ಟ್ರೆಂಡಿಂಗ್
share whatsappshare facebookshare telegram
2 Apr 2023
post image

ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ಮಾತೃಮಂಡಳಿ ಮಾತೆಯರಿಂದ ರಾಮನವಮಿ ಆಚರಣೆಯು ಹೆಬ್ರಿ ಬಡಾಗುಡ್ಡೆಯ ಕೊರಗರ ಕಾಲನಿಯಲ್ಲಿ ನಡೆಸಲಾಯಿತು. ಹೆಬ್ರಿ ಯ ಅನಂತಪದ್ಮನಾಭ ದೇವಸ್ಥಾನದ ದೀಪದಿಂದ ಪಾದಯಾತ್ರೆಯು ಶ್ರೀರಾಮದೇವರ ಭಾವಚಿತ್ರ , ಭಜನೆ, ದೀಪದೊಂದಿಗೆ 30 ಮನೆಗೆ ತೆರಳಿ ಹಣತೆ ಹಚ್ಚಿ ದೀಪಪ್ರದಾನ ಮಾಡಿ, ಲಡ್ಡು, ಪಂಚಕಜ್ಜಾಯ ನೀಡಿ ರಾಮನವಮಿಯ ಮಹತ್ವ ತಿಳಿಸಲಾಯಿತು. ಈ ಸಂದರ್ಭದಲ್ಲಿ ರಾಮದೇವರ ಅವತಾರದಿಂದ ಪಶು - ಪಕ್ಷಿ ಗಳಿಗೂ ನ್ಯಾಯ ಒದಗಿಸುವ ಮೂಲಕ ರಾಮರಾಜ್ಯದ ಮಹತ್ವ, ಸಹಬಾಳ್ವೆಯ ಸಂದೇಶವನ್ನು ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ತಿಳಿಸಿದರು. ಅನಂತಪದ್ಮನಾಭ ದೇವಸ್ಥಾನದ ಅರ್ಚಕ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಪಾದಯಾತ್ರಿಗಳಿಗೆ ಶೋಧನ್ ಹೆಗ್ಡೆ ತಂಪು ಪಾನೀಯ ನೀಡಿದರು. ಮಾತೃ ಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್ , ಸುಪ್ರೀತಾ ಶೆಟ್ಟಿ, ಮಾಲತಿ ಹಾಗೂ ಮಾತೆಯರು ಬಚ್ಚಪ್ಪು ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರು , ಅಮೃತ ಭಾರತಿ ವಿದ್ಯಾಲಯದ ಮುಖ್ಯಸ್ಥೆ ಅಪರ್ಣಾ ಆಚಾರ್ ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.