logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಮೂರು ದಿನಗಳಲ್ಲಿ ವಿಶ್ವಾದ್ಯಂತ ₹375 ಕೋಟಿ ಗಳಿಸಿದ ‘ರಾಮಾಯಣ: ಭಾಗ-1’!

ಟ್ರೆಂಡಿಂಗ್
share whatsappshare facebookshare telegram
9 Nov 2026
post image

ನವದೆಹಲಿ: ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ-1’ (Ramayana: Part One) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 375.50 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯದ ಈ ಚಿತ್ರವು ಎರಡನೇ ದಿನದ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದರೂ, ಮೂರನೇ ದಿನವಾದ ಶನಿವಾರ ಮತ್ತೆ ಭರ್ಜರಿ ಏರಿಕೆ ದಾಖಲಿಸಿದೆ. ಮೂರನೇ ದಿನ ಭಾರತದಲ್ಲಿ 69.80 ಕೋಟಿ ರೂಪಾಯಿ ಗಳಿಸಿದ್ದು, ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗಳಿಕೆ 182.70 ಕೋಟಿ ರೂಪಾಯಿಗೆ ತಲುಪಿದೆ.

ಟ್ರೇಡ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ (Sacnilk) ವರದಿಯ ಪ್ರಕಾರ, ಚಿತ್ರದ ಜಾಗತಿಕ ಒಟ್ಟು ಗಳಿಕೆ 375.50 ಕೋಟಿ ರೂಪಾಯಿಯಾಗಿದೆ. ಬಿಡುಗಡೆಯ ಮೊದಲ ದಿನ ಭಾರತದಲ್ಲಿ 64.85 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ, ಎರಡನೇ ದಿನ ಶೇ.25.9ರಷ್ಟು ಗಳಿಕೆ ಕುಸಿತ ಕಂಡಿತ್ತು. ಆದರೆ ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಮತ್ತೆ ಉತ್ತಮ ಗಳಿಕೆ ದಾಖಲಿಸಿದೆ.

ಚಿತ್ರದ ಯಶಸ್ಸಿನಲ್ಲಿ ವಿದೇಶಿ ಮಾರುಕಟ್ಟೆಗಳ ಕೊಡುಗೆಯೂ ಗಣನೀಯವಾಗಿದೆ. ಮೂರನೇ ದಿನ ವಿದೇಶಗಳಲ್ಲಿ ಅಂದಾಜು 60 ಕೋಟಿ ರೂಪಾಯಿ ಗಳಿಸಿದ್ದು, ಅಲ್ಲಿನ ಒಟ್ಟು ಗಳಿಕೆ 157.25 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದೆ. ಶನಿವಾರ ಒಂದೇ ದಿನ ಹಿಂದಿ ಆವೃತ್ತಿ 53 ಕೋಟಿ ರೂಪಾಯಿ ಗಳಿಸಿದ್ದು, ಮೂರು ದಿನಗಳ ಒಟ್ಟು ಗಳಿಕೆ 136 ಕೋಟಿ ರೂಪಾಯಿಯಾಗಿದೆ.

ಇನ್ನು ಕನ್ನಡ ಆವೃತ್ತಿ ಮೂರನೇ ದಿನ 6.30 ಕೋಟಿ ರೂಪಾಯಿ ಗಳಿಸಿದರೆ, ತೆಲುಗು ಆವೃತ್ತಿ 6 ಕೋಟಿ ರೂಪಾಯಿ ಗಳಿಸಿದೆ. ತಮಿಳು ಆವೃತ್ತಿ 2.50 ಕೋಟಿ ಹಾಗೂ ಮಲಯಾಳಂ ಆವೃತ್ತಿ 2 ಕೋಟಿ ರೂಪಾಯಿ ಗಳಿಕೆ ದಾಖಲಿಸಿವೆ.

23,696 ಪ್ರದರ್ಶನ, 26 ಲಕ್ಷಕ್ಕೂ ಅಧಿಕ ವೀಕ್ಷಕರು!

ಶನಿವಾರ ಭಾರತದಾದ್ಯಂತ ಈ ಚಿತ್ರಕ್ಕೆ ಒಟ್ಟು 23,696 ಪ್ರದರ್ಶನಗಳು ನಡೆದಿವೆ. ಈ ಪೈಕಿ ಶೇ.41.3ರಷ್ಟು ಆಸನ ಭರ್ತಿ ಪ್ರಮಾಣ ದಾಖಲಾಗಿದೆ. ಅಂದಾಜು 26.24 ಲಕ್ಷ ಮಂದಿ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದರೊಂದಿಗೆ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಚಿತ್ರ ವೀಕ್ಷಿಸಿದವರ ಒಟ್ಟು ಸಂಖ್ಯೆ ಸುಮಾರು 69.88 ಲಕ್ಷಕ್ಕೆ ತಲುಪಿದೆ.

ಭರ್ಜರಿ ಆರಂಭದೊಂದಿಗೆ ಮುನ್ನುಗ್ಗುತ್ತಿರುವ ‘ರಾಮಾಯಣ: ಭಾಗ-1’ ಚಿತ್ರದ ಮುಂದಿನ ದಿನಗಳ ಬಾಕ್ಸ್ ಆಫೀಸ್ ಪ್ರದರ್ಶನದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.