



ಕಾರ್ಕಳ : ಮೇ:06 : PSI ನೇಮಕಾತಿಯಲ್ಲಿ ಆಪಾದಿತರನ್ನು ರಕ್ಷಿಸುವ ಪಿತೂರಿ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಹೇಳಿಕೆಯನ್ನು ಕಾರ್ಕಳ ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸಿದೆ.
ದೇಶದಲ್ಲಿ 70 ವರ್ಷಗಳ ಕಾಲ ಸುದೀರ್ಘವಾಗಿ ಪಿತೂರಿಯಿಂದ ಭ್ರಷ್ಟ ಸರಕಾರ ರಚಿಸಿದ ಫಲವಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲೆಡೆ ಇವತ್ತು ಹೀನಾಯ ಪರಿಸ್ಥಿತಿಗೆ ತಲುಪಿದೆ. ಬಿಜೆಪಿ ಸರಕಾರದ ವಿರುದ್ಧ ಆಧಾರರಹಿತ ಭ್ರಷ್ಟಾಚಾರದ ಆರೋಪ ಮಾಡುವ ಮೊದಲು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರದ ವಿರುದ್ಧ ತಾನೂ ಆಡಳಿತದಲ್ಲಿದ್ದರೂ ಕೂಡ ಯಾವುದೇ ರೀತಿಯ ತನಿಖೆಗೆ ಒಳಪಡಿಸಿದ ಉದಾಹರಣೆಗಳಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಮೇಲೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು ಕಾಂಗ್ರೆಸ್ ನ ಈ ಹಿಂದಿನ ಪಿತೂರಿಯನ್ನು ಕಂಡುಹಿಡಿದು ತನಿಖೆಗೆ ಒಳಪಡಿಸಿದ್ದಾರೆ. ಬಿಜೆಪಿ ಸರಕಾರ ತಪ್ಪಿತಸ್ಥರನ್ನು ಎಂದಿಗೂ ರಕ್ಷಿಸುವುದಿಲ್ಲ.
ದಿನದಿಂದ ದಿನಕ್ಕೆ ತಳಮಟ್ಟದಿಂದ ಜನತೆಯ ಹಿಡಿತ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಶೋಚನೀಯ ಸ್ಥಿತಿಗೆ ಬಂದಿರುವುದು ಊಹಿಸಲು ಅಸಾಧ್ಯ. ಹೀಗೆ ಸುಳ್ಳುಗಳನ್ನು ಸೃಷ್ಟಿಸಿ ರಾಜ್ಯದ ಜನತೆಯ ದಾರಿತಪ್ಪಿಸುವ ಪ್ರಯತ್ನ ಮಾಡಿದರೆ ಮುಂದಿನ ಚುನಾವಣೆಯ ಸಮಯ ಕಾಂಗ್ರೆಸ್ ಪಕ್ಷ ಮಹಾಭಾರತದ ವೈಶಂಪಾಯನ ಕೆರೆಯಲ್ಲಿ ಕೌರವ ಅಡಗಿ ಕುಳಿತ ಹಾಗೆ ಕುಳಿತುಕೊಳ್ಳುವ ದಿನ ಹತ್ತಿರ ಬರಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆಎಸ್ ಹರೀಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.