



ಗೋಪೂಜೆಯ ಶುಭ ದಿನದಂದು ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ವಿನೂತನ ಹೆಜ್ಜೆ ಇಟ್ಟಿರುವ ರವೀಂದ್ರ ಶೆಟ್ಟಿ ಬಜಗೋಳಿಯವರಿಂದ "ಗೋ ದಾನ" !
ಅಶಕ್ತ ಹಿಂದೂ ಕುಟುಂಬಗಳನ್ನು ಸಶಕ್ತ ಮಾಡುವಲ್ಲಿ ಇತರ ಹಿಂದೂ ಮುಖಂಡರಿಗೆ ಮಾದರಿಯಾಗುವಂತಹ ಕಾರ್ಯಕ್ರಮ ಇಂದು ಬಜಗೋಳಿಯಲ್ಲಿ ನಡೆಯಿತು.
ಸಂಘದ ಹಿರಿಯ ಮುಖಂಡರಾದ ಶ್ರೀಯುತ ಗುಣವಂತೇಶ್ ಭಟ್, ಊರಿನ ಗಣ್ಯರ ಮತ್ತು ಸಂಘ ಪರಿವಾರದ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂತು.
ಕರ್ನಾಟಕ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿರುವ ಶ್ರೀಯುತ ರವೀಂದ್ರ ಶೆಟ್ಟಿ ಬಜಗೋಳಿ ಯವರು ತಮ್ಮ ಸ್ವಗೃಹದಲ್ಲಿ ಗೋಪೂಜೆ ನೆರವೇರಿಸಿದ ನಂತರ ಅಶಕ್ತ ಹಿಂದೂ ಕುಟುಂಬಗಳ ಮನೆ ಮನೆಗೆ ತೆರಳಿ ಉತ್ತಮ ತಳಿಯ , ಹೆಚ್ಚು ಹಾಲಿನ ಇಳುವರಿಯನ್ನು ಕೊಡುವ ಹಸುಗಳನ್ನು ಹಿಂದೂ ಸಾಂಪ್ರದಾಯಿಕ ವಿಧಿವಿಧಾನದ ಪ್ರಕಾರವೇ ದಾನ ಮಾಡಿದರು.
ಅನಾರೋಗ್ಯ ಪೀಡಿತರಾಗಿದ್ದ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿಗಳು ಇದ್ದ ಮನೆಗೆ ನುಗ್ಗಿ ಮೂರು ಹಸುಗಳನ್ನು ದರೋಡೆ ಮಾಡಿದ ಕೃತ್ಯ ನಡೆದ ನಂತರ ಶಿರ್ಲಾಲಿನ ಕೃಷ್ಣ ಶೆಟ್ಟಿ ದಂಪತಿಗಳ ಬದುಕು ದುಸ್ತರವಾಗಿದ್ದನ್ನು ಸುಸ್ಥಿರವಾಗಿ ಮಾಡುವ ನಿಟ್ಟಿನಲ್ಲಿ ಹಾಲು ಕೊಡುವ ಹಸು-ಕರುವನ್ನು ದಾನ ಮಾಡಲಾಯಿತು.
ದುರ್ಗ ಬೊಂಬೇದಡ್ಕ ಎಂಬಲ್ಲಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಗೊತ್ತಾದ ನಂತರ ಶ್ರಮಕೋರುವ ಕೆಲಸ ಮಾಡುವ ಶಿವು ಮೇರಾ ತನ್ನ ಮಡದಿ ಮತ್ತು ತನ್ನೆರಡು ಮಕ್ಕಳ ಜೀವನದ ಬಂಡಿ ಸಾಗಿಸೋದು ಹೇಗೇ ಎಂಬ ಚಿಂತೆಯಲ್ಲಿರುವಾಗಲೇ ರವೀಂದ್ರ ಶೆಟ್ಟರು ಮಾಡಿದ ಗೋ ದಾನವು ಅವರ ಮೊಗದಲ್ಲೂ ಸಂತಸದ ಕಳೆ ಮೂಡಿಸಿತು.
ಪೆರ್ವಾಜೆ ದೇವರಗುಡ್ಡೆ ಎಂಬಲ್ಲಿ ತನ್ನ ಇಳಿವಯಸ್ಸಿನಲ್ಲೂ ಬೀಡಿ ಕಟ್ಟಿ ತನ್ನ ಸಂಸಾರದ ನೌಕೆ ಸಾಗಿಸುತ್ತಿದ್ದ ಜಯಂತಿ ಮೊಗೇರ ಎಂಬ ಮಹಿಳೆಗೆ ರವೀಂದ್ರ ಶೆಟ್ರು ನೀಡಿದ ಗೋ ದಾನವು ಆಕೆಯ ಬದುಕಿಗೆ ಭದ್ರತೆಯ ಭರವಸೆ ನೀಡಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.