



ಕಾರ್ಕಳ: ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳಿವೆ.ಇಂತಹ ಉತ್ತಮ ಪುಸ್ತಕಗಳ ಓದು ಉದಾತ್ತ ವ್ಯಕ್ತಿತ್ವವನ್ನು ರೂಪಿಸಲು ನೆರೆವಾಗುತ್ತದೆ.ಎಂದು ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷರಾದ ಉದ್ಯಮಿ ನಿತ್ಯಾನಂದ ಪೈ ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಯಲ್ಲಿ ನಡೆದ ಮಾಸದ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು. ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯ ಕುರಿತಂತೆ ಧರಣೇಂದ್ರ ಕುಮಾರ್ ರವರು ಮಾತಾನಾಡುತ್ತಾ ಕುವೆಂಪುರವರು ವಿಶ್ವಮಾನವ ಪ್ರಜ್ಞೆ ಮತ್ತು ಸಮಾನತೆಯ ತತ್ವ ಮನುಜಮತ ವಿಶ್ವಪಥ ತತ್ವದಲ್ಲಿ ನಿಜವಾದ ಬದುಕು ಕಾಣಬೇಕು ಎಂಬ ಕರೆಯಿತ್ತರು. ಪ್ರಜಾಪ್ರಭಃತ್ವದ ನೆಲೆಯಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವದ ಕ್ರಾಂತಿಯಾಗಬೇಕು. ನಾವು ಅದನ್ನು ಪಾಲಿಸಬೇಕು ಅಸಮಾನತೆಗಯಿಂದ ತತ್ತರಿಸುವ ಸಮಾಜವನ್ನು ಸಮಾನತೆಯ ನೆಲೆಯಲ್ಲಿ ತರಬೇಕು. ಬಡತನದ ಬುಡಮಟ್ಟವನ್ನು ಕೀಳಲು ಎಲ್ಲರೂ ಒಂದಾಗಿ ಸಹಕರಿಸಬೇಕು ಎಂದು ಕರೆಯಿತ್ತಿದ್ದಾರೆ. ಸಮಾನತೆಯ ಬದುಕು , ಸಹಿಷ್ಣುತೆಯ ಸಮಾಜ ಎನ್ನುವುದು ಕುವೆಂಪುರವರ ಸದಾಶಯವಾಗಿತ್ತು ಎಂದು ಕೃತಿ ವಿಶ್ಲೇಷಣೆ ಮಾಡುತ್ತಾ ತಿಳಿಸಿದರು.
ದೇವದಾಸ್ ಕೆರೆಮನೆಯವರು ಮಸುಮ ಕಾರ್ಕಳರವರ ಚಿಂಬುರಿ ಕಾದಂಬರಿಯ ಬಗ್ಗೆ ಮಾತಾಡುತ್ತಾ ದಲಿತ ಸಮುದಾಯವು ಹೇಗೆ ಮೇಲ್ವರ್ಗದವರ ತುಳಿತಕ್ಕೆ ಒಳಗಾಗುತ್ತಿದೆ. ಚಿಂಬುರಿಯಂತಹ ದಿಟ್ಟೆ ಹೆಣ್ಣು ಇಡೀ ಕುಟುಂಬವನ್ನು ನಿಭಾಯಿಸುವ ಜಾಣತನ ಮತ್ತು ಜವಾಬ್ದಾರಿಯು ದಲಿತ ಸಮುದಾಯದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಮಾದರಿಯಾದುದು. ಸಂತೋಷ ಹತಾಶೆ ನೋವು ನಲಿವುಗಳ ನಡುವೆ ಭರವಸೆಯ ಬದುಕಿಗೆ ಆಗುವ ಅಡ್ಡಿಆತಂಕಗಳು ಜೀವನೋತ್ಸವವನ್ನು ಹೇಗೆ ಕಸಿದುಕೊಳ್ಳುತ್ತಿದೆ ಎನ್ನುವ ಚಿತ್ರಣ ಕಾದಂಬರಿಯುದ್ದಕ್ಕೂ ಕಾಣಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಿದ್ದರು ವೇದಿಕೆಯಲ್ಲಿ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಹರ್ಷಿಣಿ.ಕೆ ಪ್ರಾಥಮಿಕ ಶಾಲಾ.ಮುಖ್ಯ ಶಿಕ್ಷಕಿ ಲಕ್ಷೀ ಹೆಗ್ಡೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಸ್ಟರ್ ಲಕ್ಷ್ ಮರಾಠೆಯವರು ಕನ್ನಡ ಗೀತೆಯನ್ನು ಹಾಡಿದರು. ಈ ಮಾಸದ ಓದು ಸಂವಾದದಲ್ಲಿ ಶಿಕ್ಷಕರಾದ ನರಸಿಂಹವರ್ಧನ, ಸುಂದರ ಹೆಗ್ಡೆ, ನಾಗಪ್ಪ ,ದಿನೇಶ್ ಶೆಟ್ಟಿ ,ದೀಪಕ್ ದುರ್ಗಾ, ಶೈಲಜಾ ಹೆಗ್ಡೆ , ಮಾಲತಿ ಪೈ, ಪ್ರಮೀಳಾ ಶೆಟ್ಟಿ, ಶಕೀಲಾ,ಮೊದಲಾದವರು ಉಪಸ್ಥಿತರಿದ್ದರು. ಅಂತೆಯೇ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅವನೀ ಉಪಾಧ್ಯಾಯ ,ಧಾರಿಣಿ ಉಪಾಧ್ಯಾಯ ಪ್ರಾರ್ಥನೆಯನ್ನು ಹಾಡಿದರು. ಕಸಾಪ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯಾಯ ಸ್ವಾಗತಿಸಿ ಶಿಕ್ಷಕ ಗಣೇಶ್ ಜಾಲ್ಸೂರು ನಿರೂಪಿಸಿ ಡಾ ಸುಮತಿ ಪಿ ನಾಯಕ್ ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.