logo
WhatsApp Image 2026-04-02 at 14.46.04.jpeg
hindalco everlast.jpeg

1 ರಿಂದ 5 ತರಗತಿಯ ಮಕ್ಕಳೇ ಶಾಲೆಗೆ ಹೊರಡಲು ರೆಡಿಯಾಗಿ......ದಸರಾ ಬಳಿಕ ಶಾಲೆ ಶುರುವಾಗುವ ಸಾಧ್ಯತೆ?.

ಟ್ರೆಂಡಿಂಗ್
share whatsappshare facebookshare telegram
28 Sept 2021
post image

ದಸರಾ ರಜೆ ಮುಗಿದ ನಂತರ ಒಂದರಿಂದ ಐದನೇ ತರಗತಿ ಶಾಲೆ ಆರಂಭಿಸಲಾಗುವುದು. ಅಕ್ಟೋಬರ್ 20 ಕ್ಕೆ ದಸರಾ ರಜೆ ಮುಕ್ತಾಯವಾಗಲಿದೆ. ಅಕ್ಟೋಬರ್ 21 ರ ನಂತರ ಭೌತಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಅಕ್ಟೋಬರ್ 10 ರಿಂದ ಮಧ್ಯಂತರ ಅಥವಾ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್ 20 ಕ್ಕೆ ಮುಕ್ತಾಯವಾಗಲಿದೆ.ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಹೀಗಾಗಿ ಶಿಕ್ಷಣ ತಜ್ಞರು, ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ಆರೋಗ್ಯ, ಶಿಕ್ಷಣ, ವೈದ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಲು ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿ ಆರಂಭಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತಿದೆ ಎನ್ನಲಾಗಿದೆ. ಅಕ್ಟೋಬರ್ 20 ಕ್ಕೆ ಮಧ್ಯಂತರ ರಜೆ ಮುಗಿದ ನಂತರ ಒಂದರಿಂದ ಐದನೇ ತರಗತಿ ಆರಂಭಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.