



ಬೆಂಗಳೂರು:
ರಾಜ್ಯದಲ್ಲಿ ಶೀತಗಾಳಿಯ ಪರಿಣಾಮ ಭರಿ ಚಳಿಯು ಉಂಟಾಗಿದೆ . ಉತ್ತರ ದಿಕ್ಕಿನ ಮಾರುತಗಳು ಬೀಸುತ್ತಿರುವುದು, ಮೋಡದ ಹೊದಿಕೆ ಕೊರತೆ ಮತ್ತು ದಿನನಿತ್ಯದ ವ್ಯತ್ಯಾಸದ ಪರಿಣಾಮದಿಂದಾಗಿ ನಾಗರಿಕರು ಚಳಿಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ನವಂಬರ್ 23 ರಂದು ವಾಯುಭಾರ ಕುಸಿತದಿಂದಾಗಿ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನೂ ಅಧಿಕಾರಿಗಳು ನೀಡಿದ್ದಾರೆ.
ಚಿಕ್ಕನಹಳ್ಳಿ ಮತ್ತು ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 11.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಚಿಂತಾಮಣಿಯಲ್ಲಿ 11.8, ವಿಜಯಪುರದಲ್ಲಿ 11.5 ಮತ್ತು ಗದಗದಲ್ಲಿ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನವೆಂಬರ್ 17 ರವರೆಗೆ ಬೀದರ್ 10.7 ಡಿಗ್ರಿ ಸೆಲ್ಸಿಯಸ್, ವಿಜಯಪುರ 10.5, ಬಾಗಲಕೋಟೆ 10.2 ಮತ್ತು ಗದಗ 11.6 ಡಿಗ್ರಿ ಸೆಲ್ಸಿಯಸ್ ತಾಪಮಾನ ವಿದೆ. 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ದಾಖಲಾಗುತ್ತಿದ್ದು, ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.