logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಂಗಳೂರು ವಿವಿಯಲ್ಲಿ ನೇಮಕಾತಿ! ನಾನ್‌ಟೀಚಿಂಗ್‌ ಹುದ್ದೆಗೆ ಅರ್ಜಿ ಆಹ್ವಾನ!!!

ಟ್ರೆಂಡಿಂಗ್
share whatsappshare facebookshare telegram
15 Mar 2023
post image

Mangalore University Job: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ನಾನ್ ಟೀಚಿಂಗ್ ಪೋಸ್ಟ್‌ಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮಂಗಳೂರು ವಿಶ್ವವಿದ್ಯಾಲಯವು (Mangalore University Job) ಕರ್ನಾಟಕ ಪ್ರಜೆಗಳಿಂದ ಖಾಲಿ ಇರುವ ವಿವಿಧ ಬೋಧಕೇತರ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು .

ಹುದ್ದೆಗಳ ವಿವರ ಈ ಕೆಳಗಿನಂತಿದೆ : ಟೆಕ್ನೀಷಿಯನ್ ಗ್ರೇಡ್ 2 : 1 ಶಿಫ್ಟ್‌ ಮೆಕ್ಯಾನಿಕ್ : 1 ಕುಕ್ / ಅಸಿಸ್ಟಂಟ್ ಕುಕ್ : 2 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಟಿ ಅಭ್ಯರ್ಥಿಗಳು ಅರ್ಹರು. ಒಂದು ವೇಳೆ ಎಸ್‌ಟಿ ಅಭ್ಯರ್ಥಿಗಳು ಅರ್ಹರು ಸಿಗದಿದ್ದಲ್ಲಿ ಎಸ್‌ಸಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆವಾರು ಶೈಕ್ಷಣಿಕ ಅರ್ಹತೆ / ಇತರೆ ಅರ್ಹತೆ: ಟೆಕ್ನೀಷಿಯನ್ ಗ್ರೇಡ್ 2 : ಐಟಿಐ ವಿದ್ಯಾರ್ಹತೆ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು. ಶಿಫ್ಟ್‌ ಮೆಕ್ಯಾನಿಕ್ : ಎಸ್‌ಎಸ್‌ಎಲ್‌ಸಿ (SSLC ) ಜತೆಗೆ ಇಲೆಕ್ಟ್ರಿಕಲ್ ವೈರಿಂಗ್ ನಲ್ಲಿ ಕೋರ್ಸ್‌ ಮಾಡಿರಬೇಕು. ಕಾರ್ಯಾನುಭವ ಹೊಂದಿರಬೇಕು. ಕುಕ್ / ಅಸಿಸ್ಟಂಟ್ ಕುಕ್ : ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ 3 ವರ್ಷ ಕಾರ್ಯಾನುಭವ ಹೊಂದಿರಬೇಕು. ವಯಸ್ಸಿನ ಅರ್ಹತೆಗಳು: ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಅಪ್ಲಿಕೇಶನ್ ಶುಲ್ಕ : ರೂ.200. ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-04-2023 ರ ಸಂಜೆ 05-00 ಗಂಟೆವರೆಗೆ.

ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಮಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕಾಗಿ www.mangaloreuniversity.ac.in ಗೆ ಭೇಟಿ ನೀಡಿರಿ.

ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್‌ ಮಾದರಿ. ಅರ್ಜಿಯನ್ನು 10 ಸೆಟ್‌ನಲ್ಲಿ ಕವರ್‌ ಲೆಟರ್‌ನ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ವಿವರ ಬರೆದು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ‘The Registrar, Mangalore University, MangalaGangothri, Mangaluru – 574199.

ಅರ್ಜಿ ಶುಲ್ಕವನ್ನು ಚಲನ್‌ ಮೂಲಕ ಅಥವಾ ಡಿಡಿ ಯನ್ನು – ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾಲಯ ರವರ ಹೆಸರಿನಲ್ಲಿ ತೆಗೆದು ಪಾವತಿಸಬೇಕು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.