



ಡಿ.ಎಲ್ ಪ್ರೊಡಕ್ಷನ್ ನಿರ್ಮಾಣದ ರಿತ್ಯಾ ಬೊಟಾನ್ ಎಂಬ ಕೊಂಕಣಿ ಆಲ್ಬಂ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡು ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಅವಿತ್ ಲೋಬೋ ನಿರ್ಮಾಣದಲ್ಲಿ ಮೂಡಿ ಬಂದAತಹ ಈ ಆಲ್ಬಂ ಹಾಡು ಡಿಜೆ ಮರ್ವಿನ್ ಇವರು ನಿರ್ದೇಶಿಸಿದ್ದಾರೆ.
ಮಂಗಳೂರು ಸುತ್ತಮುತ್ತಲು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು ರೆಟ್ರೋ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಅತ್ಯುತ್ತಮವಾಗಿ ಹಾಡು ಮೂಡಿಬಂದಿದ್ದು ಸಂಗೀತವನ್ನು ರೋಶನ್ ಡಿ.ಸೋಜಾ ಅಂಜೆಲೋರ್ ಇವರೂ, ಸಾಹಿತ್ಯ ವಿಲ್ಸನ್ ಕಟೀಲ್ ಇವರ ಕೈಯಲ್ಲಿ ಮೂಡಿದ್ದು ಹಾಡನ್ನು ಅಶ್ವಿನ್ ಡಿಕೊಸ್ಟಾ ಮತ್ತು ಜೋಷನ್ ಸ್ವೀಡಾ ಡಿ ಸೋಜಾ ಇವರು ಹಾಡಿದ್ದಾರೆ, ಹಿನ್ನಲೆ ಸಂಗೀತವನ್ನ ಲೊಯ್ ವೆಲಂಟೈನ್ ನಿರ್ವಹಿಸಿದ್ದು ಅತ್ಯಂತ ಸುಂದರವಾಗಿ ಚಿತ್ರೀಕರಣವನ್ನ ಪ್ರಜ್ವಲ್ ಸುವರ್ಣ ಇವರು ಮಾಡಿದ್ದು ಜೊತೆಗೆ ಸಂಕಲನ, ಕಲರಿಂಗ್, ವಿ.ಎಫ್.ಎಕ್ಸ್ ಜವಾಬ್ದಾರಿಯನ್ನ ಹೊತ್ತು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಡಿನ ಕಥೆಯನ್ನ ನೊರ್‌ಬರ್ಟ್ ಜಾನ್ ಇವರು ರಚಿಸಿದ್ದು ಚಿತ್ರಕಥೆಯನ್ನ ಪ್ರಜ್ವಲ್ ಸುವರ್ಣ ಮತ್ತು ಡಿ.ಜೆ ಮರ್ವಿನ್ ಇವರು ರಚಿಸಿದ್ದಾರೆ. ಪೋಸ್ಟರ್ ಡಿಸೈನ್ ಸುಹೈಲ್ ಇವರು ನಿರ್ವಹಿಸಿದ್ದಾರೆ.
ಹಾಗೆಯೇ ಈ ಕೊಂಕಣಿ ಹಾಡಿನಲ್ಲಿ ಎಲ್ಟನ್ ಮಸ್ಕರೇನಸ್, ವೆನ್ಸಿಟಾ ಡಾಯಸ್, ಡೊಲ್ಲ ಮಂಗಳೂರು, ಸುಜಾತಾ ಶಕ್ತಿನಗರ, ರೋಶನ್ ಫೆರ್ನಾಂಡಿಸ್ ಇವರು ಅಧ್ಭುತವಾಗಿ ನಟಿಸಿದ್ದಾರೆ. ಬಹಳಷ್ಟು ಜನರ ಸಹಕಾರದೊಂದಿಗೆ ಕೊಂಕಣಿ ಹಾಡು ಉತ್ತಮವಾಗಿ ಮೂಡಿಬಂದಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.