



ಉಡುಪಿ: 2018ನೇ ಸಾಲಿನಲ್ಲಿ ಆಯುಷ್ಮನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ನ್ನು ಹೊಂದಿರುವ ಫಲಾನುಭವಿಗಳು ಹೊಸತಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಮುಖ್ಯಮಂತ್ರಿಯವರ ಆರೋಗ್ಯ ಕರ್ನಾಟಕ ಕಾರ್ಡ್ನ್ನು ಪಡೆಯಲು ಉಪಕೇಂದ್ರಗಳಲ್ಲಿ ಶಿಬಿರಗಳು ನಡೆಯುತ್ತಿದ್ದು ಈ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಅಥವಾ ಆಶಾ ಕಾರ್ಯಕರ್ತೆಯರುಗಳನ್ನು ಸಂಪರ್ಕಿಸಬಹುದಾಗಿದ್ದು, ಅಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಗ್ರಾಮ ಒನ್ ಸೆಂಟರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಆರೋಗ್ಯ ಸಂಸ್ಥೆಗಳ ಉಪಕೇಂದ್ರಗಳಲ್ಲಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಮುಖಾಂತರ ಇಲ್ಲವೇ ಆಶಾ ಕಾರ್ಯಕರ್ತೆಯರುಗಳ ಮುಖಾಂತರ. ಹಾಗೂ ಆಯುಷ್ಮಾನ್ ಆಪ್ ಅಥವಾ ಈ ಲಿಂಕ್ https://beneficiary.nha.gov.in/ ಉಪಯೋಗಿಸಿಕೊಂಡು ಸ್ವಯಂ ನೋಂದಾವಣಿ ಮಾಡಿಕೊಂಡು ಕಾರ್ಡ್ಗಳನ್ನು ಸೃಜಿಸಿಕೊಳ್ಳಬಹುದಾಗಿದೆ.
ಕಾರ್ಡ್ನ ಪ್ರಯೋಜನಗಳು: ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ಗರಿಷ್ಟ 5ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ., ಎ.ಪಿ.ಎಲ್ ಕಾರ್ಡ್ದಾರರಿಗೆ 1.5ಲಕ್ಷ (ಶೇ.30ರಷ್ಟು) ಉಚಿತ ಆರೋಗ್ಯ ಸೇವೆ.ಯೋಜನೆಯಡಿ ಒಟ್ಟು 1658 ಚಿಕಿತ್ಸಾ ಪ್ಯಾಕೇಜ್‌ಗಳು ಹಾಗೂ ದೇಶಾದ್ಯಂತ ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.