



ಕಾರ್ಕಳ: : ಕಾರ್ಕಳ ತಾಲೂಕಿನ ಗುಂಡ್ಯಡ್ಕ ಎಂಬಲ್ಲಿ ನಿರ್ಮಾಣವಾಗಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 3.71 ಕೋಟಿ ಅನುದಾನ ಮಂಜೂರಾಗಿದ್ದು ಮೊದಲ ಕಂತಿನ ರೂ 1.12 ಕೋಟಿ ಅನುದಾನ ಬಿಡುಗಡೆ ಆಗಿರುತ್ತದೆ.
ಕಾರ್ಕಳ ಕ್ಷೇತ್ರದ ಯುವ ಸಮುದಾಯಕ್ಕೆ ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೂ. 4.75 ಕೋಟಿ ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಭೇತಿ ಸಂಸ್ಥೆ ವತಿಯಿಂದ ಅಲ್ಪವಾಧಿ ಕೋರ್ಸುಗಳು ಆರಂಭವಾಗಲಿದ್ದು ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ.
ಕರ್ನಾಟಕ ಸರಕಾರ ಹಾಗೂ ಟಾಟಾ ಟೆಕ್ನಾಲಜೀಸ್ ಪ್ರೈ. ಲಿ. ಸಹಭಾಗಿತ್ವದಲ್ಲಿ ರೂ. 27.20 ಕೋಟಿ ವೆಚ್ಚದಲ್ಲಿ ಲ್ಯಾಬ್ ಮತ್ತು ವರ್ಕ್ ಶಾಪ್ ಕಟ್ಟಡಗಳ ಕಾಮಗಾರಿ ಮುಗಿದಿದ್ದು ಉಪಕರಣಗಳ ಜೋಡಣೆ ಕಾರ್ಯ ನಡೆಯುತ್ತಿದ್ದು ಅತ್ಯಂತ ಶೀಘ್ರವಾಗಿ ಕೋರ್ಸುಗಳು ಆರಂಭಗೊಳ್ಳಲಿದೆ. ಸರಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯ ನೂತನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತುತ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಮತ್ತು ಉದ್ಯೋಗ ಆದಾರಿತ ಕೋರ್ಸುಗಳ ಆರಂಭದಿಂದಾಗಿ ಕ್ಷೇತ್ರದ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಗಳು ಅತ್ಯಂತ ಪ್ರಯೋಜಕಾರಿಯಾಗಲಿವೆ ಎಂದು ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.