



ರಿಪೋರ್ಟ್ ಕಾರ್ಡ್ ಬಿಡುಗಡೆ ಮೂಲಕ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಚಿತ್ರಣ
ಕಾರ್ಕಳ: ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳದ ಮೂಲಕ ಕಾರ್ಕಳ ತಾಲೂಕಿನ ಅಭಿವೃದ್ದಿಯನ್ನು ಮುನ್ನೆಲೆಗೆ ತಂದ ಸಚಿವ ಸುನಿಲ್ ಕುಮಾರ್ ಅವರ ಐದು ವರ್ಷಗಳ ಸಮಗ್ರ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಸಮಾರಂಭ ಮಾರ್ಚ್ 19 ರಂದು ಸಂಜೆ 4.30 ಕ್ಕೆ ಕಾರ್ಕಳ ಕುಕ್ಕೂಂದೂರು ಗ್ರಾ.ಪಂ ಬಳಿಯ ಮೈದಾನದಲ್ಲಿ ನಡೆಯಲಿದೆ
ಪರಿಸರ ಉತ್ಸವ, ಕಾರ್ಕಳ ಉತ್ಸವ , ಉದ್ಯೋಗ ಮೇಳ,ಗಾಂಧೀಜಿಗೆ ನೂರೈವತ್ತು ಸ್ವಚ್ಚತೆಗೆ ಸ್ವಲ್ಪಹೊತ್ತು, ಮನೆಯೇ ಮೊದಲ ಪಾಠಶಾಲೆ,ವಾತ್ಸಲ್ಯ ಮಕ್ಕಳ ಆರೋಗ್ಯ ಶಿಬಿರ , ವಿಭಿನ್ನ ಪರಿಕಲ್ಪನೆಯ ಅರ್ಥಪೂರ್ಣ ಕಾರ್ಯಕ್ರಮಗಳು ಜನಜಾಗೃತಿಯ ಜತೆಗೆ ಸಾಮಾಜಿಕ ಕಾಳಜಿಯನ್ನು ಕಂಡವರು. ತನ್ನ ಕ್ಷೇತ್ರದಲ್ಲಿ ಸುಮಾರು ೨44 ಕ್ಕೂ ಅಧಿಕ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿವ ಮೂಲಕ ಯೋಜನೆಗಳಾದ ೧೦೮ ಕೋಟಿ ವೆಚ್ಚದ ಎಣ್ಣೆಹೊಳೆ ಏತನೀರಾವರಿ ಯೋಜನೆ,೧೩ ಕೋಟಿ ರೂ ವೆಚ್ಚದ ಕಾರ್ಕಳ ನಗರ ಒಳಚರಂಡಿ ಯೋಜನೆ,ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ೮ ಕೋಟಿ ವೆಚ್ಚದ ಕಾರ್ಕಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಮೂಲಕ ಅಭಿವೃದ್ಧಿಗೆ . ಕೋಟಿ ಚೆನ್ನಯ್ಯ ಥೀಂ ಪಾರ್ಕ್,ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್,ಹೆಬ್ರಿ ಹಾಗೂ ನಲ್ಲೂರಿನ ಹರಿಯಪ್ಪನಕೆರೆಯಲ್ಲಿ ಬೋಟಿಂಗ್, ಸಾಲು ಮರದ ತಿಮಕ್ಕ ಟ್ರೀ ಪಾರ್ಕ್ ನಿರ್ಮಾಣ,ಮಠದಕೆರೆ ಅಭಿವೃದ್ಧಿ ಸಾಧ್ಯವಾಗಿದೆ. ,ಕೋಟಿ ಕಂಠ ಗಾಯನ ಮೂಲಕ ಕನ್ನಡ ನಾಡು ನುಡಿಯ ಅನುರಣಿಸಿದ ಕೀರ್ತಿ ಸಚಿವ ಸುನೀಲ್ ಕುಮಾರ್ ಗೆ ಸಲ್ಲಿಲುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.