



ಉಡುಪಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಹಾಗೂ ಕನ್ನಡ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೈ ಕೆ ಮುದ್ದುಕೃಷ್ಣ ಅವರ ಆತ್ಮಕಥನ 'ಹಾಡು ಹಿಡಿದ ಜಾಡು ' ಕೃತಿ ಅನಾವರಣವು ಇದೇ ಬರುವ 6ನೇ ತಾರೀಕು ಶನಿವಾರ 5:30ಕ್ಕೆ ಸರಿಯಾಗಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಬಿಡುಗಡೆಗೊಳ್ಳಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ,ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಹಾಗೂ ರಂಗಸಂಗಾತಿ ಮಂಗಳೂರು ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೃತಿಯನ್ನು ಚಲನಚಿತ್ರ ನಿರ್ದೇಶಕ ಹಾಗೂ ರಂಗನಿರ್ದೇಶಕ ಶ್ರೀ ಕಾಸರಗೋಡು ಚಿನ್ನ ಬಿಡುಗಡೆ ಮಾಡಲಿರುವರು, ಕೃತಿಕರ್ತ ಡಾ| ನಾ. ದಾಮೋದರ್ ಶೆಟ್ಟಿ , ನಾಟಕಕಾರ ಶಶಿರಾಜ್ ಕಾವೂರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಶೆಟ್ಟಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದರ ವ್ಯವಸ್ಥಾಪಕ ಆಫೀಸ್ ರೆಹಮಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ವೈ ಕೆ ಮುದ್ದುಕೃಷ್ಣ ಅವರಿಂದ ಭಾವಗೀತೆ ಕಾರ್ಯಕ್ರಮ ನಡೆಯಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.