



ಪೆರ್ಡೂರು: ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಪೆರ್ಡೂರು ಘಟಕ ಇವರ ವತಿಯಿಂದ ಮಹತೋಭಾರ ಶ್ರೀ ಅನಂತಪದ್ಮನಾಭ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಆರಾಟೋತ್ಸವದಂದು ಮಾ.18 ಸಂಜೆ 7 ಗಂಟೆಗೆ ಆರಾಟಕಟ್ಟೆ ಬಳಿ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಹಿನ್ನೆಲೆ ಗಾಯಕ ಮೂಲ್ಕಿ ರವೀಂದ್ರ ಪ್ರಭು ಮತ್ತು ಬಳಗದವರಿಂದ 'ರಾಗ್ ರಂಗ್' ಭಕ್ತಿ, ಭಾವ, ಜಾನಪದ ಗೀತೆಗಳು ಸುಗಮ ಸಂಗೀತ ಕಾರ್ಯಕ್ರಮ ತದನಂತರ 'ಬೃಹತ್ ಸುಡು ಮದ್ದು ಪ್ರದರ್ಶನ' ನಡೆಯಲಿದೆ.
ಸರ್ವರಿಗೂ ಅದರದ ಸ್ವಾಗತ ಬಯಸುವ ಪೆರ್ಡೂರು ವಿ.ಹಿಂ.ಪ. ನ ಗೌರವ ಅಧ್ಯಕ್ಷರಾದ ಶ್ರೀ ಬಿ. ಎನ್. ರಾಮಚಂದ್ರ ಕುಂಜಿತ್ತಾಯ
ಪೆರ್ಡೂರು ಬಜರಂಗದಳದ ಸಂಚಾಲಕರಾದ ಯುವರಾಜ್ ಪೆರ್ಡೂರು
ವಿ.ಹಿಂ.ಪ., ಪೆರ್ಡೂರಿನ ಅಧ್ಯಕ್ಷರಾದ ರಮೇಶ್ ಪೆರ್ಡೂರು
ವಿ.ಹಿಂ.ಪ., ಪೆರ್ಡೂರಿನ ಕಾರ್ಯದರ್ಶಿ ವಿಶ್ವನಾಥ್ ಪೆರ್ಡೂರು ಮತ್ತು ಸರ್ವ ಸದಸ್ಯರು, ವಿಶ್ವ ಹಿಂದ ಪರಿಷದ್ ಮತ್ತು ಬಜರಂಗದಳ, ಪೆರ್ಡೂರು ಘಟಕ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.