



ಕೊಲ್ಕತ್ತಾ: ಖ್ಯಾತ ನಿರ್ದೇಶ ಶ್ಯಾಂ ಬೆನಗಲ್ ಅವರ ಎರಡು ಕಿಡ್ನಿಗಳು ವೈಫಲ್ಯವಾಗಿವೆ. ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿದ್ದು ಇದೀಗ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಭಾರತ ಚಲನ ಚಿತ್ರ ರಂಗಕ್ಕೆ ಅಪೂರ್ವವಾದ ಕೊಡುಗೆ ನೀಡಿರುವ ಶ್ಯಾಂ ಬೆನಗಲ್, ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪದ್ಮ ಶ್ರೀ, ಪದ್ಮ ಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ. ಪ್ರಸಕ್ತ ಶ್ಯಾಂ ಬೆನಗಲ್ ಅವರಿಗೆ ಮನೆಯಲ್ಲಿ ಡಯಾಲಿಸ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಂಗ್ಲಾದ ವಿಮೋಚನಾ ಹೋರಾಟಗಾರ ಶೇಕ್ ಮುಜಿಬರ್ ರೆಹಮಾನ್ ಅವರ ಜೀವನ ಕಥೆ ಆಧರಿಸಿದ ಚಿತ್ರ ನಿರ್ಮಾಣಕ್ಕೆ ಶ್ಯಾಂ ಬೆನಗಲ್ ಸಿದ್ದತೆ ನಡೆಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.