



ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವ ಉದ್ಧೇಶದಿಂದ ನವೆಂಬರ್ ಅಂತ್ಯದವರೆಗೆ ಅಲ್ಲಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಾಲೂಕು ತಾಹಶೀಲ್ದಾರರು ಅದೇಶ ಹೊರಡಿಸಿದ್ದು ಪಾರ್ಕಿನ ಅಭಿವೃದ್ಧಿಗಾಗಿ ಈ ಕ್ರಮವನ್ನು ಸ್ವಾಗತಿಸುತ್ತೇವೆ, ಆದರೆ ಯಾವೆಲ್ಲಾ ಕಾಮಾಗಾರಿಗಳು ಬಾಕಿ ಇವೆ ? ಈಗ ಯಾವ ಕಾಮಗಾರಿಯನ್ನು ಕೈಗೊಳ್ಳುತ್ತೀರಿ ಎಂದು ಅವರು ಸ್ಪಷ್ಟಪಡಿಸಬೇಕು ಎಂದು ಪುರಸಭಾ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ
ಥೀಮ್ ಪಾರ್ಕಿನಲ್ಲಿ ಸ್ಥಾಪಿಸಿದ್ದ ಪರಶುರಾಮನ ಪ್ರತಿಮೆಯ ಬಗ್ಗೆ ಹಲವಾರು ಗೊಂದಲಗಳಿದ್ದು ಉಡುಪಿ ಉಸ್ತುವಾರಿ ಸಚಿವರ ಬೇಟಿಯಿಂದ ಅದು ನಿವಾರಣೆಯಾಗಿದೆ. ಅವರ ಸಮ್ಮುಖದಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಪ್ರತಿಮೆ ಸಂಪೂರ್ಣ ಕಂಚಿನದಲ್ಲ ಎಂದು ಸ್ಪಷ್ಟವಾಗಿದೆ. ಆದರೆ ನಿರ್ಮಿತಿ ಕೇಂದ್ರದವರು ನೀಡುತ್ತಿದ್ದ ಕೆಲವು ವ್ಯತಿರಿಕ್ತ ಹೇಳಿಕೆಗಳಿಂದ ಇನ್ನೂ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಹಾಗಾಗಿ ಬಾಕಿ ಇರುವ ಮತ್ತು ಇನ್ನು ಕೈಗೊಳ್ಳುವ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಆ ಜವಾಬ್ದಾರಿ ತಾಹಶೀಲ್ದಾರರು ಮತ್ತು ನಿರ್ಮಿತಿ ಕೇಂದ್ರದಾಗಿರುತ್ತದೆ. ಹಾಗಾಗಿ ಈ ಬಗ್ಗೆ ಸ್ಪಷ್ಟವಾದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಆಗ್ರಹಿಸುತ್ತೇನೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.