logo
WhatsApp Image 2026-04-02 at 14.46.04.jpeg
hindalco everlast.jpeg

ಮರು ಜೀವ ಪಡೆದ 'ಕೆಫೆ ಕಾಫಿ ಡೇ' ಕಂಪೆನಿ: ಸಾಲ ಮರು ಪಾವತಿಯಲ್ಲಿ ಮಾಳವಿಕಾ ಹೆಗ್ಡೆ ಯಶಸ್ವಿ

ಟ್ರೆಂಡಿಂಗ್
share whatsappshare facebookshare telegram
15 Jan 2022
post image

ಬೆಂಗಳೂರು :ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ಪ್ರತಿಷ್ಠಿತ ಕಂಪೆನಿ 'ಕೆಫೆ ಕಾಫಿ ಡೇ' ಇದೀಗ ಮತ್ತೆ ಮರು ಜೀವ ಪಡೆದಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಇದು ಭಾರಿ ಸುದ್ದಿಯಾಗುತ್ತಿದೆ.

ಕಂಪೆನಿಯ ಸ್ಥಾಪಕ, ಮಾಲಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಸಾವಿನ ಬಳಿಕ ಇದೀಗ ಸಿದ್ದಾರ್ಥ ಅವರ ಪತ್ನಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಪುತ್ರಿ ಮಾಳವಿಕಾ ಹೆಗ್ಡೆ ಕಂಪೆನಿಯ ದೊಡ್ಡ ಮೊತ್ತದ ಸಾಲವನ್ನು ತೀರಿಸುವಲ್ಲಿ ಯಶಸ್ವಿಯಾಗಿದ್ದು, ಸಂಸ್ಥೆಯನ್ನು ಉಳಿಸಿದ ಮಾಳವಿಕಾ ಹೆಗ್ಡೆ ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹಲವು ಯೂಟ್ಯೂಬ್, ಸುದ್ದಿ ಮಾಧ್ಯಗಳು ವಿಶ್ಲೇಷಿಸಿದೆ.

ಎರಡು ವರ್ಷಗಳಲ್ಲಿ ಕಂಪೆನಿಯ ಸಾಲದ ಮೊತ್ತವನ್ನು 7,200 ಕೋಟಿ ರೂಪಾಯಿಯಿಂದ 1,731 ಕೋಟಿಗೆ ಇಳಿಸುವಲ್ಲಿ ಯಶಸ್ವಿಯಾಗಿರುವ ಮಾಳವಿಕಾ ಹೆಗ್ಡೆ ಕಂಪೆನಿಯ ನೌಕರರಲ್ಲಿಯೂ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

''ಅವಿರತ ಪ್ರಯತ್ನದಿಂದ ತನ್ನ ವ್ಯಾಪಾರ ಮತ್ತು ಜೀವನವನ್ನು ಮರಳಿ ಪಡೆದ ಶ್ರೀಮತಿ ಮಾಳವಿಕಾ ಹೆಗ್ಡೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಅವರು ಯಾವಾಗಲೂ ಸಂಕಲ್ಪದ ದಾರಿ ದೀಪವಾಗಿ ನಿಲ್ಲುತ್ತಾರೆ ಮತ್ತು ಜೀವನದಲ್ಲಿ ಭರವಸೆಗಳನ್ನು ಕಳೆದುಕೊಂಡವರಿಗೆ ಅವರೊಂದು ಉತ್ತಮ ಮಾದರಿ. ಕೆಫೆಯ ಸುವರ್ಣ ದಿನಗಳಿಗಾಗಿ ಎದುರುನೋಡುತ್ತಿದ್ದೇವೆ'' ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ.

ಇನ್ನು ಹಲವಾರು ಆಂಗ್ಲ ಮಾಧ್ಯಮಗಳೂ ಸೇರಿದಂತೆ ಮುಳುಗಿ ಹೋಗುತ್ತಿದ್ದ ಕಂಪನಿಯನ್ನು ಮರುಜೀವಗೊಳಿಸಿದ ಮಾಳವಿಕಾ ಹೆಗ್ಡೆ ಕುರಿತು ವಿಶೇಷ ವರದಿಗಳನ್ನು ಪ್ರಕಟಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.