



ಬಜಗೋಳಿ: ರುಚಿ ರುಚಿಯಾದ ಕೇಕ್, ಹುಟ್ಟು ಹಬ್ಬ –ಶುಭ ಸಮಾರಂಭಗಳ ಆಚರಣೆಗಾಗಿ ವೆರೈಟಿ ಡಿಸೈನ್ ಗಳಲ್ಲಿ ಕೇಕ್, ಹೀಗೆ ಕೇಕ್ ಪ್ರಿಯರಿಗೆ ಆರಂಭವಾಗಲಿದೆ ರಿಬ್ಬನ್ಸ್ ಆಂಡ್ ಬಲೂನ್ಸ್ ಕೇಕ್ ಶಾಪ್.. ಮುಂಬೈಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆಂಡ್ ಬಲೂನ್ಸ್ ನ ನೂತನ ಶಾಖೆಯು ಕಾರ್ಕಳ ದ ಬಜಗೋಳಿಯ ಶ್ರೀರಾಂ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಅ.15 ರಂದು 10 ಘಂಟೆಗೆ ಉದ್ಘಾಟನೆ ಗೊಳ್ಳಲಿದೆ.

ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಸ್ವಾಮಿಜಿ ಶ್ರೀ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಸಂಸ್ಥೆಯು ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಬಜಗೋಳಿ ನೂರುಲ್ ಹುದ ಮಸೀದಿಯ ಧರ್ಮಗುರು ದಾವುದ್ ಲತೀಪ್, ಸೈಂಟ್ ಥೋಮಸ್ ಚರ್ಚ್ ನ ಧರ್ಮಗುರು ಮನೋಜ್, ಶ್ರಿ ಸಾಯಿಕೃಪ ಜ್ಯುವೆಲ್ಲರ್ಸ್ ನ ಪ್ರಸಾದ್ ಸಿ ಆಚಾರ್ಯ, ಅಗ್ನಿಲ ಪೆಟ್ರೋಲ್ ಬಂಕ್ ಮಹಾವೀರ್ ಜೈನ್, ಕಲ್ಕೂರ ಗ್ರೂಪ್ ನ ರಂಜನ್ ಕಲ್ಕೂರ, ರಿಬ್ಬನ್ ಅ್ಯಂಡ್ ಬಲೂನ್ಸ್ ನ ಸಿ.ಎ ಸತೀಶ್ ಶೆಟ್ಟಿ, ಮುನಿಯಾಲು ಉದಯ ಕೃಷ್ಣ ಶೆಟ್ಟಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ನವದುರ್ಗ ಪುಡ್ ಪ್ರಾಡಕ್ಟ್ ನ ಗುಣಪಾಲ್ ಎನ್ ಶೆಟ್ಟಿ, ಶ್ರೀದೇವಿ ಮೆಡಿಕಲ್ ನ ಸದಾಶಿವ ಪೂಜಾರಿ, ಪೆರ್ಡೂರಿನ ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.