



ಬೆಂಗಳೂರು; ರಾಜ್ಯದಲ್ಲಿ ಅಕ್ಕಿ ಬೆಲೆ ಕಳೆದ ಎರಡು ತಿಂಗಳ ಅವಧಿಯಲ್ಲಿ 8-10 ರೂ.ವರೆಗೆ ಏರಿಕೆಯಾಗಿದೆ. ಮಳೆ ಪ್ರವಾಹ ಪರಿಸ್ಥಿತಿ ಗಳಿಂದ ಕೃಷಿ ಹಾನಿಯಾಗಿದೆ ಆದ್ದರಿಂದ ಬೆಲೆ ಏರಿಕೆ ಯಾಗಿದೆ . ಉತ್ಪಾದನೆ ಕುಂಠಿತ ವಾಗಿದೆ. ಸ್ಟೀಮ್ ರೈಸ್ ದರ ಕೆಜಿಗೆ 38 ರಿಂದ 48 ರೂ. ಏರಿಕೆಯಾದರೆ, ಸೋನಾಮಸೂರಿ 52 ರೂ.ನಿಂದ 60 ರೂ. ದೋಸೆ ಅಕ್ಕಿ 30 ರಿಂದ 34 ರೂ. ಜೀರಾ ರೈಸ್ 110 ರೂ.ನಿಂದ 120 ರೂ.ವರೆಗೆ ಏರಿಕೆಯಾಗಿದೆ.ದೇಶದಲ್ಲಿ ಈ ವರ್ಷ ಅಕ್ಕಿ ಉತ್ಪಾದನೆ ಕುಂಠಿತವಾಗಿದೆ. ಈ ನಡುವೆ ವಿದೇಶಗಳಿಗೆ ಹೆಚ್ಚಿನ ರಪ್ತು ಕಾರಣ ಅಕ್ಕಿ ಕೊರತೆ ಕಂಡುಬಂದಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಅಕ್ಕಿದರ ಶೇ. 20 ರಷ್ಟು ದುಬಾರಿಯಾಗಿದ್ದು, ಇದೇ ಮೊದಲ ಬಾರಿಗೆ ಪ್ರತಿ ಕೆಜಿ ಅಕ್ಕಿ 8-10 ರೂ.ಹೆಚ್ಚಳವಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.