



, ಕಾರ್ಕಳ:, ಎ.೨೩: ಹುಟ್ಟು ಹಬ್ಬವನ್ನು ನಾವು ಹೇಗೂ ಆಚರಿಸಬಹುದು. ಆದರೆ ಸೇವೆಯೊಂದಿಗೆ ಆಚರಿಸಿ ಜನಮೆಚ್ಚುಗೆ ಪಾತ್ರವಾಗುವುದು ಆದರ್ಶದಾಯತ್ವವಾಗಿದೆ. ಇಂತಹ ಮನಸ್ಸುಗಳು, ಮನೋಭಾವಗಳು ಇನ್ನಷ್ಟು ಬೆಳೆಯಬೇಕು. ಕಸುಬು ಎಲ್ಲರೂ ಮಾಡುತ್ತಾರೆ ಆದರೆ ಅದನ್ನು ಪ್ರತಿಷ್ಠೆಯನ್ನಾಗಿಸಿ ವಿಶ್ವಕ್ಕೆ ಪರಿಚಯಿಸುವಲ್ಲಿ ಯಶಕಂಡ ಶಿವಾಸ್ ಸಾಧನೆ ಎಲ್ಲರಿಗೂ ಮಾದರಿ ಎಂದು ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ತಿಳಿಸಿದರು.
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯು ಎ.ಜೆ ಹಾಸ್ಪಿಟಲ್-ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಘ ಸಹಯೋಗದೊಂದಿಗೆ ಕಾರ್ಕಳ ಮೂಲತಃ ಬಾಲಿವುಡ್ ರಂಗದಲ್ಲಿ ಹೇರ್ ಸ್ಟೆöÊಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾ'ಸ್ ಹೇರ್ ಡಿಝೈರ‍್ಸ್ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಇವರ ಷಷ್ಠ ್ಯಪೂರ್ತಿ ಸಂಭ್ರಮ ನಿಮಿತ್ತ ಧರ್ಮಾರ್ಥ ಆರೋಗ್ಯ ತಪಾಸಣಾ ಶಿಬಿರವನ್ನು ಇಂದಿಲ್ಲಿ ಶನಿವಾರ ಬೆಳಿಗ್ಗೆ ಕಾರ್ಕಳ ಮಿಯಾರು ಸೈಂಟ್ ಡೋಮಿನಿಕ್ ಚರ್ಚ್ನ ಸಮುದಾಯ ಭವನದಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿü ಆಗಿದ್ದು, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಲಾಂಛನ ಅನಾವರಣ ಗೊಳಿಸಿ ಟ್ರಸ್ಟ್ನ್ನು ಸೇವಾರ್ಪಣೆಗೈದÀÄ ಶಶಿಧರ್ ಶೆಟ್ಟಿ ಮಾತನಾಡಿದರು.
ಗುಲಾಬಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷÀ ಡಾ| ಶಿವರಾಮ ಕೆ.ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭÀವÀನ್ನು ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಉದ್ಘಾಟಿಸಿದ್ದು ಎ.ಜೆ ಹಾಸ್ಪಿಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಸಹ ಪ್ರಾಧ್ಯಾಪಕಿ ಡಾ| ಪ್ರಣಮ್ಯ ಜೈನ್ ಇವರು ಸ್ಟೆಥೋಸ್ಕೊಪ್ ಮೂಲಕ ಹಾರ್ಟ್ ಬೀಟ್ ಪರೀಕ್ಷಿಸಿ ಮತ್ತು ಬ್ಲಡ್‌ಪ್ರೆಶರ್ ಮೆಷನ್‌ನಿಂದ ಸುರೇಶ್ ಎಸ್.ಭಂಡಾರಿ ಅವರ ರಗ್ತದ ಒತ್ತಡ ಪರಿಶೀಲಿಸಿ ತಪಾಸಣೆಗೈದು ಶಿಬಿರದ ಅಧಿಕೃತವಾಗಿ ಶಿಬಿರಕ್ಕೆ ಚಾಲನೆಯನ್ನಿತ್ತರು.
ಸೈಂಟ್ ಡೊಮಿನಿಕ್ ಚರ್ಚ್ ಮಿಯಾರು ಇದರ ಪ್ರಧಾನ ಗುರು ರೆ| ಫಾ| ಪಾವ್ಲ್ ರೆಗೋ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಮಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ಅಮೀನ್, ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಸಮಿತಿ ಅಧ್ಯಕ್ಷ ದಿನೇಶ್ ಮೊಗೇರ ಗೌರವ ಅತಿಥಿüಗಳಾಗಿ ವೇದಿಕೆಯಲ್ಲಿದ್ದರು.
ಸಮಾಜ ಸೇವೆಯ ಸಂಕಲ್ಪ ಪಾವಿತ್ರ‍್ಯತಾವಾದುದು. ಸಮಾಜದ ಕಟ್ಟಕಡೆಯ ಸಾಲಿನಲ್ಲಿ ಜನ್ಮ ತಾಳಿದ ಶಿವರಾಮ ಭಂಡಾರಿ ಇಂದು ನಿತ್ಯೋತ್ಸವದ ರೂವಾರಿ. ದೇಶಕ್ಕೊಂದು ಸಂವಿಧಾನ ಇದ್ದಂತೆ ಬದುಕಿಗೊಂದು ಸಂವಿಧಾನವನ್ನಿರಿಸಿ ಬದುಕು ಬಂಗಾರವಾಗಿಸಿ ಮಾದರಿ ಆಗಿದ್ದಾರೆ. ಭಂಡಾರಿ ಸಮುದಾಯಕ್ಕೆ ಮಾತ್ರವಲ್ಲ ಇಡೀ ಹಿಂದುಳಿದ ವರ್ಗದ ಜನತೆಗೆ ಕುಲವೃತ್ತಿ ಕಲಿಸಿಕೊಟ್ಟ ಕೀರ್ತಿ ಇವರದ್ದು. ಭಂಡಾರಿ ಜಾತಿಯಲ್ಲಿ ಕುಲವೃತ್ತಿಗೆ ಡಾಕ್ಟರೇಟ್ ಪಡೆದ ಮೊದಲ ವ್ಯಕ್ತಿ ಆಗಿರುವುದೇ ನಮ್ಮ ಹಿರಿಮೆ, ಮನಕುಲದ ಜೀವನ ಪರೋಪಕಾರದಿಂದ ಸಾರ್ಥಕವಾಗುವುದು. ಇವು ಆತ್ಮಕ್ಕೆ ಸಂಬAಧಪಟ್ಟ ಸಂಪತ್ತುಗಳಾಗಿವೆ. ಇದನ್ನು ಶಿವರಾಮ ಮಾಡಿ ಧಣ್ಯರೆಣಿಸಿದ್ದಾರೆ. ದಾನ,ಧರ್ಮ, ಕರ್ಮ, ಪುಣ್ಯ, ಸಮಾಜ ಸೇವೆಗಳು ಆತ್ಮಕ್ಕೆ ಪೂರಕವಾದ ಸೇವೆಗಳಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಸಂಬAಧ ಪಟ್ಟ ಕೆಲಸಗಳಿಂದ ಶಿವರಾಮರು ತೃಪ್ತರಾಗಿರುವುದು ಪ್ರಶಂಸನೀಯ ಎಂದು ಸುರೇಶ್ ಭಂಡಾರಿ ತಿಳಿಸಿದರು. ಜಾತಿ ಮತ ಭೇದವಿಲ್ಲದೆ ಇವತು ನಡೆಸಿದ ಆರೋಗ್ಯ ಶಿಬಿರ ಸರ್ವೋತ್ಕöÈಷ್ಟವಾದುದು. ಇದೇ ಪುಣ್ಯದ ಪ್ರಾಪ್ತಿಗೆ ಪೂರಕವಾದ ಸಮಾಜ ಸೇವೆ ಆಗಿದೆ. ದಯೆಯೇ ಧರ್ಮದ ಮೂಲವನ್ನು ಬದುಕು ನಡೆಸುವ ನಿಮ್ಮ ಬಾಳು ಹಸನಾಗಲಿ ಎಂದು ವಂ| ಪೌಲ್ ರೆಗೋ ಶುಭಶಂಸನೆಗೈದರು.

ಉದಯ ಶೆಟ್ಟಿ ಮಾತನಾಡಿ ಜೀವನದಲ್ಲಿ ಶಿಖಕ್ಕೇರುತ್ತಿರುವಂತೆ ಕೆಳಗೂ ನೋಡಿ ಬಾಳುವ ಕೆಲವೊಬ್ಬರಲ್ಲಿ ಶಿವರಾಮ ಭಂಡಾರಿ ಓರ್ವರು. ಅವರ ಮುಗ್ಧತೆ, ಶಾಂತತೆ ಅವರ ವ್ಯಕ್ತಿತ್ವದ ಅಸ್ಮಿತೆಯಾಗಿದೆ. ತನ್ನ ಕುಲಕಸಬುನಿಂದ ವ್ಯಕ್ತಿ ಜಾಗತಿಕವಾಗಿ ಬೆಳೆಯಬಹುದು ಅನ್ನುವುದನ್ನು ಇವರು ಶಿವನಾಗಿ ತೋರಿಸಿದ್ದಾರೆ. ಕಾಯಕವೇ ಕೈಲಾಸ ಎಂಬುವುದನ್ನು ಕಾರ್ಕಳದ ಹಳ್ಳಿ ಹುಡುಗ ಮಾಡಿ ತೋರಿಸಿರುವುದು ನಮಗೂ ಪ್ರತಿಷ್ಠೆಯಾಗಿದೆ.
ಕಾರ್ಯಕ್ರಮದಲ್ಲಿ ಉಡುಪಿಯ ಚರ್ಮರೋಗ ತಜ್ಞ-ಸೌಂದರ್ಯಲAಕಾರಕ ಡಾ| ಲೋಕೇಶ್ ರಾವ್ ಬಿ.ಕೆ ಉಡುಪಿ, ಕಾರ್ಕಳದ ನಿವೃತ್ತ ಶಿಕ್ಷಕಿ, ಸಮಾಜ ಸೇವಕಿ ಲೋನಾ ಪೀಟರ್ ನೊರೊನ್ಹಾ, ಮೋಡೆಲ್ ಬ್ಯಾಂಕ್ ಲಿಮಿಟೆಡ್ ಮುಂಬಯಿ ಇದರ ನಿರ್ದೇಶಕಿ ಬೆನೆಡಿಕ್ಟಾ ಬಿ.ರೆಬೆಲ್ಲೊ, ಹಿರಿಯ ಪತ್ರಕರ್ತ ಡಾ| ಶೇಖರ್ ಅಜೆಕಾರ್ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸಮಾಜ ಸೇವಕರಾದ ದೀಪಕ್ ಡಿ'ಮೆಲ್ಲೋ (ಮಾಸ್ಟರ್ ಕ್ಯಾಟರರ್ಸ್), ಸದಾನಂದ ಮೊಗೇರ ಮಿಯಾರ್, ಡಾ| ಪ್ರಣಮ್ಯ ಜೈನ್, ವೈದ್ಯಕೀಯ ತಂಡದ ಸಂಯೋಜಕ ಜಯರಾಜ್ ಸುವರ್ಣ, ನಿವೃತ್ತ ಯೋಧ ಸದಾನಂದ ಟಿ.ಭಂಡಾರಿ, ಚೇತನ್ ಶೆಟ್ಟಿ, ನವೀನ್ ಜೆ.ಸಾಂಕ್ತೀಸ್ (ಐ-ನೆಟ್), ಪತ್ರಕರ್ತ ಆರೀಫ್ ಕಲಕಟ್ಟಾ ಇವರನ್ನು ಅತಿಥಿüಗಳು ಗೌರವಿಸಿ ಅಭಿವಂದಿಸಿದರು.
ಲತಾ ರವಿ ಮಿಯಾರ್ ಪ್ರಾರ್ಥನೆಯನ್ನಾಡಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶÀÀರೀಫ್ ಸ್ವಾಗತಿಸಿದರು. ಪತ್ರಕರ್ತ ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದರು. ಗುಲಾಬಿ ಕೃಷ್ಣ ಟ್ರಸ್ಟ್ನ ವಿಶ್ವಸ್ಥ ಸದಸ್ಯೆಯರಾದ ಅನುಶ್ರೀ ಎಸ್.ಭಂಡಾರಿ, ಶ್ವೇತಾ ರಘು ಭಂಡಾರಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಚೇತನ್ ಶೆಟ್ಟಿ ಅತಿಥಿü, ಪುರಸ್ಕöÈತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಅಜೆಕಾರ್ ವಂದನಾರ್ಪಣೆಗೈದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.