



ಬೆಂಗಳೂರು; ಕರ್ನಾಟಕ ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಈ ಬಾರಿಯ ಪ್ರಶಸ್ತಿ ಹರಿಹರ ಪಲ್ಲತ್ತಡ್ಕದವರಾಗಿದ್ದು, ಕಾರ್ಕಳ ತಾಲೂಕಿನ ಉದಯವಾಣಿ ಪತ್ರಿಕೆ ವರದಿಗಾರರಾಗಿರುವ ಬಾಲಕೃಷ್ಣ ಭೀಮಗುಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ ಭಾಗದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಬಳಿಕ ಉಡುಪಿ ಜಿಲ್ಲೆ ಅನಂತರದಲ್ಲಿ ಕಾರ್ಕಳ ತಾಲೂಕು ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜ್ವಲಂತ ಸಮಸ್ಯೆ ಸಹಿತ ಮಾನವಸಾಕ್ತಿಯ ಹಲವಾರು ಲೇಖನಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ತೆರೆಮರೆಯಲ್ಲಿ ಸಾಧನೆಗೈಯ್ಯುತ್ತಿರುವ ಅತೀ ಚುರುಕಿನ ಸಾಧಕ ಪತ್ರಕರ್ತರಾಗಿದ್ದಾರೆ.ಇವರ ಈ ಎಲ್ಲ ಸಾಧನೆ ಫಲ ಎಂಬಂತೆ ಈ ಪ್ರಶಸ್ತಿ ನೀಡಲ್ಪಡಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.