


ಆಸ್ಟೇಲಿಯಾ ಟೆಸ್ಟ್ ಪ್ರವಾಸದಲ್ಲಿ ನಾಯಕನಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಪೂರ್ತಿ ವಿಫಲರಾಗಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲೇ ಕ್ರಿಕೆಟ್ ಕೆರಿಯರ್ ಗೆ ಅಂತ್ಯ ಹೇಳುತ್ತಾರೆ ಎನ್ನಲಾಗುತ್ತಿದೆ.
. 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಎಂಎಸ್ ಧೋನಿ ಕೂಡ ಇದೇ ಪರಿಸ್ಥಿತಿಯಲ್ಲಿ ನಾಯಕತ್ವವನ್ನು ತೊರೆದಿದ್ದರು. ತಮ್ಮ ತಂತ್ರಗಾರಿಕೆ ನಡೆಯದೇ ಇದ್ದಾಗ ನಾಯಕನಾಗಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾಯಕತ್ವಕ್ಕೆ ಮಾತ್ರವಲ್ಲ, ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಿಸಿದ್ದರು. ನಂತರ ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಇದೀಗ 10 ವರ್ಷಗಳ ನಂತರ, 2014 ರಂತೆ ಕಥೆಯನ್ನು ಮರಳಿ ಬರೆಯಬಹುದಾದ ಸಮಯ ಬಂದಿದೆ ಎಂದು ತೋರುತ್ತದೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಈ ಟೆಸ್ಟ್ ಬಳಿಕ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದೆ. ಆದರೆ ರೋಹಿತ್ ಧೋನಿಯಷ್ಟೂ ಸಕ್ಸಸ್ ಆಗದೇ ಇರೋದ್ರಿಂದ ಕ್ರಿಕೆಟ್ ಗೆ ವಿದಾಯ ಹೇಳ್ತಾರಾ ಎನ್ನುವ ಕುತೂಹಲ ಹುಟ್ಟಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.