logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ಅಗ್ನಿಶಾಮಕ ದಳದ ಪಾತ್ರ: ಸಂಕ್ಷಿಪ್ತ ಮಾಹಿತಿ

ಟ್ರೆಂಡಿಂಗ್
share whatsappshare facebookshare telegram
24 Mar 2025
post image

ಕಾರ್ಕಳ:ಅಗ್ನಿಶಾಮಕ ದಳದವರ ಕೆಲಸಗಳು ತುಂಬಾ ಅಪಾಯಕಾರಿ. ಆದರೂ ಅವರು ತಮ್ಮ ವೃತ್ತಿಗೆ ಎಂದಿಗೂ ಹೆದರಿದವರಲ್ಲ. ಕರ್ತವ್ಯವನ್ನು ಸಲ್ಲಿಸುವ ಜಾಯಮಾನ ಅವರದ್ದಾಗಿದೆ. ದಿನದ 24 /7 ಸಂದರ್ಭಗಳಲ್ಲಿಯು ಜೀವದ ಹಂಗು ತೊರೆದು ಸಾಹಸ ಪ್ರವೃತ್ತಿ ಅವರದ್ದು. ಅವರ ಕೆಲಸದಲ್ಲಿರುವ ನಿಷ್ಠೆ, ಬದ್ಧತೆಯನ್ನು ಎಲ್ಲರೂ ಮೆಚ್ಚಲೇಬೇಕು.

ಕಾರ್ಕಳದ ವ್ಯಾಪ್ತಿಯ ಅಗ್ನಿಶಾಮಾಕ ದಳ: ಕಾರ್ಕಳ ತಾಲೂಕು ತುಂಬಾ ವಿಶಾಲವಾದ ತಾಲೂಕಾಗಿದೆ. ಬೇಸಿಗೆ ಸಂದರ್ಭದಲ್ಲಿ ಅಗ್ನಿ ಅವಘಡಗಳು ತುಂಬಾ ಹೆಚ್ಚಾಗಿಯೇ‌ಸಂಭವಿಸುತ್ತವೆ.. ಅಗ್ನಿ ಅವಘಡಗಳು ಅಧಿಕವಾಗಲು ಕಾರಣ, ಬೀಡಿ ಸಿಗರೇಟು ಹಾಗು ವಿದ್ಯುತ್ ಶಾರ್ಟ್ ಸರ್ಕೂಟ್ ಗಳು. ಸ್ವಲ್ಪ ಕಿಡಿ ತಾಗಿದರು ಈ ಬೇಸಿಗೆಗೆ ಬೆಂಕಿ ರಭಸವಾಗಿ ಹರಡುತ್ತದೆ. ಅದರಲ್ಲೂ ಗಾಳಿ ಅತಿಯಾದರಂತೂ ಹೆಚ್ಚಾಗಿ ಅಪಾಯಗಳು ಸಂಭವಿಸುತ್ತದೆ. ಜನಸಾಮಾನ್ಯರಿಗೆ ಬೆಂಕಿಯನ್ನು ಆರಿಸುವುದು ಅಸಾಮಾನ್ಯ ಕೆಲಸವೇ ಸರಿ.

ಅಗ್ನಿಶಾಮಕ ದಳಕ್ಕೆ ಬರುವ ಕರೆಗಳು : ಕಾರ್ಕಳ ವಿಶಾಲ ತಾಲೂಕಾಗಿರುವುದರಿಂದ ಅನೇಕ ಕರೆಗಳು ಬರುತ್ತದೆ. ಕಾರ್ಕಳದ ಅಗ್ನಿಶಾಮಕ ದಳ ಕಾರ್ಕಳ, ಹೆಬ್ರಿ,ಕಾಪು ಈ ಮೂರು ತಾಲೂಕುಗಳನ್ನು ವ್ಯಾಪ್ತಿಯನ್ನು ನೋಡಿಕೊಳ್ಳಬೇಕಾಗುತ್ತದೆ. . ಒಂದೇ ವಾಹನ ಇದ್ದರೂ ಸಹ ಅವರು ತಮ್ಮ ಪ್ರಯತ್ನ ಮೀರಿ ತಮ್ಮ ಕೆಲಸದಲ್ಲಿ ಬದ್ಧರಾಗಿರುತ್ತಾರೆ. ಈ ವರ್ಷ ಅಂದರೆ ಮಾರ್ಚ್ 15 ವರೆಗೆ ಬಂದ ಒಟ್ಟು ಕರೆಗಳು: 47, ವಿಶೇಷ ಕರೆಗಳು :29 ಹಿಂದಿನ ವರ್ಷ ಬಂದ ಒಟ್ಟು ಕರೆಗಳು :149 ಅಗ್ನಿಯನ್ನು ನಿಂದಿಸಲು ಒಟ್ಟು ನಾಲ್ಕು ಜನ ಮೆನ್ಸ್ ಹೋಗುತ್ತಾರೆ. ಅದರಲ್ಲಿ ಒಬ್ಬ ಲೀಡರ್,ಒಬ್ಬ ಡ್ರೈವರ್, ಮತ್ತಿಬ್ರು ಆಫೀಸರ್ , ಅಗ್ನಿಶಾಮಾಕ ಠಾಣೆಯಲ್ಲಿ ಮೂರು ವಾಹನಗಳಿದ್ದು ಅದರಲ್ಲಿ ಒಂದು ಮಾತ್ರ ಚಲನೆಗೆ ಪೂರಕವಾಗಿದೆ. ಉಳಿದ ಎರಡು ವಾಹನಗಳ ಅವಧಿ ಮುಗಿದಿದೆ. ಅಗ್ನಿ ನಂದಿಸುವ ವಾಹನದಲ್ಲಿ 4500 ಲೀಟರ್ ನೀರು ತುಂಬಿರುತ್ತದೆ ಎಲ್ಲಾ ಫೈರ್ ಗೂ Able ಒಂದೇ.ಅಗ್ನಿ ಅವಘಡಕ್ಕೆ ಕಾರಣಗಳು ಶಾರ್ಟ್ ಸರ್ಕ್ಯೂಟ್, ಟ್ರಾನ್ಸ್ಫರ್ ನಿಂದ, ಅತಿಯಾದ ಗಾಳಿಯಿಂದ ಅಗ್ನಿ ಅವಘಡಗಳು ಸಂಭವಿಸುತ್ತದೆ.

ಸುಷ್ಮಾ ತೃತೀಯ ಬಿ.ಎ ಜರ್ನಲಿಸಂ ಎಂ ಪಿ ಎಂ ಕಾಲೇಜು ಕಾರ್ಕಳ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.