logo
WhatsApp Image 2026-04-02 at 14.46.04.jpeg
hindalco everlast.jpeg

ಪೆಟ್ರೋಲ್‌ ಟ್ಯಾಂಕರಿಗೆ ಡಿಕ್ಕಿ ಹೊಡೆದ ರೋಲ್ಸ್ ರಾಯ್ಸ್‌ ಕಾರು: ಇಬ್ಬರು ಸಾವು

ಟ್ರೆಂಡಿಂಗ್
share whatsappshare facebookshare telegram
25 Aug 2023
post image

ಹೊಸದಿಲ್ಲಿ: ಹೊಸದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್‌ ವೇನಲ್ಲಿ ರೋಲ್ಸ್ ರಾಯ್ಸ್ ಕಾರು ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ರೋಲ್ಸ್ ರಾಯ್ಸ್ ಫ್ಯಾಂಟಮ್ – ಉಬರ್-ಐಷಾರಾಮಿ ಲಿಮೋಸಿನ್ ಕಾರು ಪೆಟ್ರೋಲ್ ಟ್ಯಾಂಕರ್‌’ಗೆ ಡಿಕ್ಕಿ ಹೊಡೆದ ನಂತರ ಮಂಗಳವಾರ ಹರಿಯಾಣದ ನುಹ್‌ನಲ್ಲಿ ಭೀಕರ ಅಪಘಾತವಾಗಿದ್ದು, ಈ ವೇಳೆ ಇಬ್ಬರು ಬಲಿಯಾಗಿದ್ದಾರೆ. ರೋಲ್ಸ್ ರಾಯ್ಸ್ ಗಂಟೆಗೆ 230 ಕಿಮೀ ವೇಗದಲ್ಲಿ ಓಡಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಗುರ್ಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಚಂಡೀಗಢದ ದಿವ್ಯಾ ಮತ್ತು ತಸ್ಬೀರ್ ಹಾಗೂ ದೆಹಲಿಯ ವಿಕಾಸ್ ಎಂದು ಗುರುತಿಸಲಾಗಿದ್ದು, ಟ್ಯಾಂಕರ್ ಚಾಲಕ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಮೃತಪಟ್ಟ ಇಬ್ಬರು ಎಂದು ತಿಳಿದು ಬಂದಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.