



ಕಾರ್ಕಳ :ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ಮಣ್ - ಮುಂಡ್ಕೂರು - ಸಂಕಲಕರಿಯ ರಾಜ್ಯ ಹೆದ್ದಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. ೨೦ ಕೋಟಿ ಅನುದಾನ ಬಿಡುಗಡೆಯಾಗಿದ್ದು ಫೆ.೨೦ ರಂದು ಬೆಳಗ್ಗೆ ೯ ಘಂಟೆಗೆ ಇಂಧನ ಹಾಗು ಕನ್ನಡ ಹಾಗು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಗುದ್ದಲಿಪೂಜೆ ನೆರಲೇರಿಸಲಿದ್ದಾರೆ. ಒಟ್ಟು ೯ ಕಿ.ಮೀ ಉದ್ದದ ರಸ್ತೆಯಲ್ಲಿ ೭ ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ೧೦ ಅಡಿ ಅಗಲದ ರಸ್ತೆಯಾಗಿರುತ್ತದೆ. ಈ ರಸ್ತೆಯು ಮಂಗಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕಟೀಲು ದೇವಸ್ಥಾನಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು ಪ್ರಸ್ತುತ ತುಂಬಾ ಅಪಾಯಕಾರಿ ತಿರುವುಗಳನ್ನು ಹೊಂದಿದ್ದರಿAದ ಸುಗಮ ಸಂಚಾರಕ್ಕೆ ತುಂಬಾ ಅಡಚಣೆಯಾಗಿತ್ತು. ರಸ್ತೆಯ ತಿರುವು ಮುರುವುಗಳನ್ನು ಸರಿಪಡಿಸಿ ನೇರ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಮಂಗಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕಟೀಲು ದೇವಸ್ಥಾನ ಸಂಪರ್ಕಕ್ಕೆ ಅನುಕೂಲವಾಗಲಿದೆ…
ಹೊಸ ಫೀಡರ್‌ಗಳಿಗೆ ಚಾಲನೆ : ಫೆ.೨೦ ಬೆಳಿಗ್ಗೆ ೧೦.೦೦ ಗಂಟೆಗೆ ಮೆಸ್ಕಾಂ ಇಲಾಖೆಯಿಂದ ಬೆಳ್ಮಣ್ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಬೆಳ್ಮಣ್ ಉಪಕೇಂದ್ರದಿAದ ಹಾಲಿ ಇರುವ ೦೨ ಫೀಡರ್‌ಗಳ ಜೊತೆಗೆ ೦೩ ಹೆಚ್ಚುವರಿ ಫೀಡರ್‌ಗಳನ್ನು ಅಳವಡಿಸಲಾಗಿದ್ದು ಒಟ್ಟು ೦೫ ಫೀಡರ್‌ಗಳಿಗೆ ಮಾನ್ಯ ಸಚಿವರು ಚಾಲನೆ ನೀಡಲಿದ್ದು ಇದರಿಂದ ಬೆಳ್ಮಣ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.