logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಒಂದೇ ಚಾರ್ಜ್ ನಲ್ಲಿ 80 ಕಿಮೀ ಓಡುತ್ತದೆ. ಒಕಾಯ ಇ ವೆಹಿಕಲ್ಸ್ . ಬೆಲೆನು ಕಡಿಮೆ . ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಟ್ರೆಂಡಿಂಗ್
share whatsappshare facebookshare telegram
25 Feb 2023
post image

ಬೆಂಗಳೂರು: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಲೆಕ್ಟ್ರಿಕ್ ವಾಹನ ಬ್ರಾಂಡ್ Okaya EV, ಹೊಸ ಎಲೆಕ್ಟ್ರಿಕ್ ಸ್ಕೂಟರ್ “Faast F2F “ ಅನಾವರಣಗೊಳಿಸಿದೆ. ಒಂದೇ ಚಾರ್ಜ್ ನಲ್ಲಿ 70-80 ಕಿಮೀಗಳ ಗಮನಾರ್ಹ ಶ್ರೇಣಿಯೊಂದಿಗೆ ಲೋಡ್ ಗೆ ಅನುಗುಣವಾಗಿ 55 ಕಿಮೀ/ ಗಂ ಗರಿಷ್ಠ ವೇಗಹೊಂದಿದೆ, ಇದು ನಗರ ಸವಾರಿಗಳಿಗೆ ಸೂಕ್ತವಾಗಿದೆ. Okaya Faast F2F ನಂಬಿಕೆಗೆ ಅರ್ಹ, ಕೈಗೆಟಕುವ ಬೆಲೆಗೆ ದೊರಕುವ , ಆಹ್ಲಾದಕರ ನಗರ ಸಂಚಾರ ಬಯಸುವವರಿಗೆ ತಕ್ಕೆಂತೆ ವಿನ್ಯಾಸಗೊಳಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಬಯಸುವ ವಿದ್ಯಾರ್ಥಿಗಳು , ಯುವ ವೃತ್ತಿಪರರು ಮತ್ತು ಗೃಹ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವವರನ್ನು ಗುರಿಯಾಗಿರಿಸಿಕೊಂಡು Faast F2F ಬಿಡುಗಡೆಯಾಗಿದೆ. ಸೂಕ್ತ ಶ್ರೇಣಿಯನ್ನು ಒದಗಿಸುವ ಎಲೆಕ್ಟ್ರಿಕ್ ಸ್ಕೂರಟರ್ ಒದಗಿಸುವುದೇ Okaya ಗುರಿ. ಗ್ರಾಹಕರ ನಿರೀಕ್ಷಣೆಗಳನ್ನೂ ಮೀರಿ ಈ ಸ್ಕೂಟರ್ 800W-BLDC-ಹಬ್ ಮೋಟರ್ ನಿಂದ ಚಾಲಿತವಾಗಿದೆ. 60V36Ah (2.2 kWh) ಲೀಥಿಯಂ ION – LFP ಬ್ಯಾಟರಿಯಿಂದ ಜೋಡಿಸಲಾಗಿದೆ. ಇದು ಅತ್ಯುನ್ನತ ಸುರಕ್ಷತಾ ಸೌಕರ್ಯಗಳನ್ನು ಒಳಗೊಂಡಿದೆ. ಬ್ಯಾಟರಿ ಮೇಲೆ 2 ವರ್ಷದ ವಾರಂಟಿ ಇದೆ.

Okaya Faast F2F ಸ್ಕೂಟರ್ ತನ್ನ ಸಾಟಿಯಿಲ್ಲದ ಕಾರ್ಯಕ್ಷಮತೆಯ ಹೊರತಾಗಿಯೂ ಸುಗಮ ಸವಾರಿಗೆ ಅನುಕೂಲವಾಗುವಂತೆ ಫ್ರಂಟ್ ಸಸ್ಪೆನ್ಷನ್ ಮತ್ತು ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ರಿಯಲ್ ಶಾಕ್ ಅಬ್ಸಾರ್ಬರ್ಸ್ ಹೊಂದಿದೆ. ರಿಮೋಟ್ ಕೀ, ಎಲ್ಲ ಅಗತ್ಯ ಮಾಹಿತಿಯನ್ನು ಹೊಂದಿರುವ ಡಿಜಿಟಲ್ ಇನ್ಸ್ಟ್ರು ಮೆಂಟ್ ಕ್ಲಸ್ಟರ್ ಮತ್ತು ಸ್ಟೈಲಿಶ್ DRL ಹೆಡ್ ಲ್ಯಾಂಪ್ ಗಳು ಮತ್ತು ಎಡ್ಜ್ ಟೈಲ್ ಲ್ಯಾಂಪ್ ಗಳು ಬಕಾಯಾ ಫಾಸ್ಟ್ F2F ಸ್ಕೂಟರ್ ವೈಶಿಷ್ಟ್ಯಗಳಾಗಿವೆ.

ಹೊಸದಾಗಿ ಬಿಡುಗಡೆಯಾದ Faast F2F E-Scooter ಕುರಿತು ಪ್ರತಿಕ್ರಿಯಿಸಿದಿ Okaya ಇಲೆಕ್ಟ್ರಿಕ್ ವೆಹಿಕಲ್ಸ್ ವ್ಯವಸ್ಥಾಪಕ ನಿರ್ದೇಶಕ ಅನ್ಶು ಗುಪ್ತಾ, “ Faast F2F E-Scooter ಬಿಡುಗಡೆಯೊಂದಿಗೆ ನಾವು ಭಾರತದ ಉತ್ತಮ ಗುಣಮಟ್ಟದ ಇ-ವೆಹಿಕಲ್ ಗಳಿಗೆ ಹೊಸ ಮಾನದಂಡವನ್ನು ಹಲವಾರು ಹಂತದಲ್ಲಿ ಹೊಂದಿಸಿದ್ದೇವೆ. ಅದರ ವಿಶಿಷ್ಟ ಮತ್ತು ವಿಶ್ವಾಸಾರ್ಹ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನಾವು ಹೆಚ್ಚು ವ್ಯಾಪಕ ಶ್ರೇಣಿಯ ಗ್ರಾಹಕ ವಿಭಾಗಗಳಿಗೆ ಮನವಿ ಮಾಡಿದ್ದೇವೆ. ಆರಾಮದಾಯಕ ಮತ್ತು ಸೊಗಸಾದ Faast F2F ಶಕ್ತಿ ಅತ್ಯಂತ ಸಮರ್ಥವಾಗಿದೆ. ನಮಗೆ ಗ್ರಾಹಕರಿಂದ ವ್ಯಾಪಕ ಬೆಂಬಲ ದೊರಕುತ್ತಿದೆ. ಕೈಗೆಟಕುವ ಬೆಲೆಯಲ್ಲಿ ಇಲೆಕ್ಟ್ರಿಕ್ ವಾಹನಗಳು , ಸ್ಕೂಟರ್ ಬಯಸುವವರ ವಿಶ್ವಾಸಕ್ಕೆ ನಾವು ಪಾತ್ರರಾಗಿದ್ದೇವೆ.

ವೈಶಿಷ್ಟ್ಯ-ಪ್ಯಾಕ್ ಮಾಡಲಾದ Okaya Faast F2F ಇ-ಸ್ಕೂಟರ್ ಬೆಲೆ ರೂ . 83,999/-(ಎಕ್ಸ್ ಶೋ ರೂಂ). ಇದು ಆರು ಬಣ್ಣಗಳಲ್ಲಿ ಲಭ್ಯವಿದೆ;- ಮೆಟಾಲಿಕ್ ಬ್ಲಾಕ್ , ಮೆಟಾಲಿಕ್ ಸಯಾನ್, ಮ್ಯಾಟ್ ಗ್ರೀನ್ , ಮೆಟಾಲಿಕ್ ಗ್ರೇ, ಮೆಟಾಲಿಕ್ ಸಿಲ್ವರ್ ಮತ್ತು ಮೆಟಾಲಿಕ್ ವೈಟ್ .

Okaya Faast F2F ಪ್ರಮುಖ ವೈಶಿಷ್ಟ್ಯಗಳು:

• ಅಧಿಕ ಸಾಮರ್ಥ್ಯದ LFP ಬ್ಯಾಟರಿ: ದೀರ್ಘಾವಧಿಯ ಲಿಥಿಯಂ -ಐಯಾನ್ LFP ಬ್ಯಾಟರಿಯೊಂದಿಗೆ ಸುಸಜ್ಜಿತವಾಗಿದ್ದು ಅದು ದೀರ್ಘಾವಧಿಯ ಜೀವಿತಾವಧಿಯನ್ನು ನೀಡುತ್ತದೆ. ಹೆಚ್ಚಿನ ತಾಪದಲ್ಲಿಯೂ ಸಹ ಹೆಚ್ಚಿನ ಕ್ರಿಯಾತ್ಮಕತೆ ಮತ್ತು ಸ್ಥಿರತೆ ನೀಡುತ್ತದೆ. ಇದಲ್ಲದೆ. ಬ್ಯಾಟರಿಯು 2 ವರ್ಷ/ 20,000 ಕಿಮೀ ವಾರಂಟಿಯನ್ನು ಹೊಂದಿದೆ.

• ಸುಗಮ ಸಂಚಾರ ಅನುಭವ ಮತ್ತು ಉತ್ತಮ ಕಾರ್ಯಕ್ಷಮತೆ: ನಿಜವಾಗಿ ಹೇಳ ಬೇಕೆಂದರೆ F2F ಕಾರ್ಯಕ್ಷಮತೆಗೆ ಹೇಳಿ ಮಾಡಿಸಿದ ಇ-ಸ್ಕೂಟರ್ ಆಗಿದೆ. 55 kmph ಗರಿಷ್ಟ ವೇಗವನ್ನು ನೀಡುತ್ತದೆ. ಇದೇ ಕಾರಣಕ್ಕೆ ನಗರ ಸವಾರಿಗೆ ಸೂಕ್ತವಾಗಿದೆ.ಎಂತಹ ಜನದಟ್ಟಣೆಯಲ್ಲೂ ಸುರಕ್ಷತೆಯನ್ನು ಒದಗಿಸುತ್ತದೆ.ಇಷ್ಟೇ ಅಲ್ಲನ 10 ಇಂಚಿನ ಟ್ಯೂಬ್ ಲೆಸ್ ಟೈರ್ ಗಳು, ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದ್ದು , ಇದು ಉಬ್ಬು ರಸ್ತೆಗಳಲ್ಲಿಯೂ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

• ನಿಮ್ಮೊಂದಿಗೆ ದೀರ್ಘಾವಧಿಯವರೆಗೆ , ಉತ್ತಮ ಶ್ರೇಣಿಯೊಂದಿಗೆ:ಇಂದಿನ ತಲೆಮಾರಿನವರಿಗೆ ಅತ್ಯಂತ ಸೂಕ್ತವಾಗಿದೆ. ಇದು 60V36Ah (2.2 kWh) ಲಿಥಿಯಂ ION – LFP ಬ್ಯಾಟರಿಯೊಂದಿಗೆ 800W ಮೋಟಾರ್ ಅನ್ನು ನೀಡುತ್ತದೆ. ಇದು ಸಂಪೂರ್ಣವಾಗಿ ಚಾರ್ಜ್ ಆಗಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ: ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ,ನಗರದ ರಸ್ತೆ ಪರಿಸ್ಥಿತಿಗೆ ಸಂಪೂರ್ಣ ಹೊಂದಿಕೊಳ್ಳುತ್ತದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.