



ಕಾರ್ಕಳ ; ಯುದ್ದ ಪೀಡಿತ ಯುಕ್ರೇನ್ ನಲ್ಲಿ ಕಾರ್ಕಳ ಮೂಲದ ವಿದ್ಯಾರ್ಥಿ ಸೇರಿದಂತೆ ಉಡುಪಿಜಿಲ್ಲೆಯ ಯ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ.ಧನಂಜಯ ಅವರ ಪುತ್ರ ರೋಹನ್ ಉಕ್ರೇನ್‌ನ ಕಾರ್ಕೀವ್‌ನಲ್ಲಿರುವ ನೇಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ಐದನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಅವರೊಂದಿಗೆ ಮುಂದಿನ ಮೇ ತಿಂಗಳ ವೇಳೆ ಅವರ ಕೋರ್ಸ್ ಮುಗಿಯಲಿತ್ತು. ಇವರೊಂದಿಗೆ ಕಾರ್ಕಳ ಹಾಗೂ ಹಿರಿಯಡ್ಕ ಮೂಲದ ಪುಣೆಯ ಇಬ್ಬರು ಸಹ ಇದೇ ಮೆಡಿಕಲ್ ಕಾಲೇಜಿನಲಿ ಕಲಿಯುತಿದ್ದಾರೆ ಎಂದು ಮಾಹಿತಿ ಲಭಿಸಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.