logo
WhatsApp Image 2026-04-02 at 14.46.04.jpeg
hindalco everlast.jpeg

ಶಂಕರನಾರಾಯಣ: ಚರ್ಚ್ ಗೆ ಪ್ರಾರ್ಥನೆಗೆ ಹೋಗಿದ್ದ ಮಹಿಳೆಯ ಮೇಲೆ ಹಲ್ಲೆ: ಧರ್ಮಗುರು ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

ಟ್ರೆಂಡಿಂಗ್
share whatsappshare facebookshare telegram
19 Sept 2022
post image

ಶಂಕರ ನಾರಾಯಣ: ಚರ್ಚ್ ಗೆ ಪ್ರಾರ್ಥನೆಗೆಂದು ಹೋಗಿದ್ದ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ರಿಯ ಬೆಳ್ವೆ ಗ್ರಾಮದ ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮ ಗುರು ಅಲೆಕ್ಸಾಂಡರ್ ಲೂಯಿಸ್ ಸೇರಿದಂತೆ ಮೂವರ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ವೆಯ ಗುಮ್ಮಹೊಲ ಗ್ರಾಮದ ಶಾಂತಿ ಡೇಸಾ ಹಲ್ಲೆಗೊಳಗಾದ ಮಹಿಳೆ. ಇವರು ಸೆ.18ರಂದು ಪ್ರಿಯಾ ಡಿ’ಸೋಜಾ ಹಾಗೂ ಸ್ಯಾಂಡ್ರಾ ಎಂಬವರೊಂದಿಗೆ ಚರ್ಚ್ ಗೆ ಪ್ರಾರ್ಥನೆಗೆ ಹೋಗಿದ್ದರು. ಪ್ರಾರ್ಥನೆ ಮುಗಿಸಿ ಹಾಸ್ಟೇಲ್ ಗೆ ನೀರು ಕುಡಿಯಲು ಹೋಗಿದ್ದರು. ಈ ವೇಳೆ ಪ್ರವೀಣ ಹಾಗೂ ಆತನ ತಂದೆ ಹಾಸ್ಟೇಲ್ ಒಳಗಡೆ ಬರಬೇಡಿ, ಚರ್ಚಿನ ಪರಿಸರದಲ್ಲಿ ಸುತ್ತಾಡಿದರೇ ಅವರಿಗೆ ಹಲ್ಲೆ ಮಾಡಿ ಎಂದು ಧರ್ಮಗುರುಗಳು ಹೇಳಿದ್ದಾರೆ ಎಂದು ತಿಳಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ‌ ತಿಳಿಸಲಾಗಿದೆ. ಪ್ರವೀಣ್ ಹಾಗೂ ಆತನ ತಂದೆ ಗುಮ್ಮಹೊಲದ ಸಂತ ಜೊಸೇಪರ ಚರ್ಚ್ ನ ಧರ್ಮಗುರು ಅಲೆಕ್ಸಾಂಡರ್ ಲೂಯಿಸ್ ಅವರ ಪ್ರಚೋದನೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.