



ಕೃತಿ ಬರೆಯಲು ಇಚ್ಚಾಶಕ್ತಿ ,ಶ್ರದ್ಧೆ ಪ್ರಮುಖ ಪಾತ್ರವಹಿಸುತ್ತದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು . ಅವರು ಬುಧವಾರ ನಂದಳಿಕೆ ಮಹಾಲಿಂಗೆಶ್ವರ ದೇವಾಲಯದ ಸಭಾಂಗಣದಲ್ಲಿ ಚಾವಡಿ ಅರಮನೆ ಯ ಸರಳ ಎಸ್ ಎಸ್ ಹೆಗ್ಡೆ ಬರೆದ “ಸತ್ಯಮಾಲೋಕಂದ ಸಿರಿ” ಕೃತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದರು . ತುಳುನಾಡು ದೈವಗಳನಾಡಗಿದೆ, ಇಲ್ಲಿನ ಸಿರಿಗಳ ಕಾರ್ಣಿಕ ಮೂಲಕ ಸಂಸ್ಕೃತಿಯ ಶ್ರೀಮಂತಿಕೆ ತೋರಿಸುತ್ತದೆ ,ಸಿರಿಗಳ ಜನಪದವನ್ನು ಕೃತಿಯನ್ನಾಗಿಸಿ ಉಳಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.
ವಿಜಯಾ ಬ್ಯಾಂಕ್ ವಿಶ್ರಾಂತ ಪ್ರಬಂಧಕ ಭುವನ ಪ್ರಸಾದ್ ಹೆಗ್ಡೆ ಮಾತನಾಡಿ ನಂದಳಿಕೆ ಸಿರಿ ಜಾತ್ರೆ ಗೆ ಪ್ರಸಿದ್ಧ ವಾಗಿದೆ. ಇಲ್ಲಿಯ ಸಿರಿಗಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಬರೆದಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಜನಾಂಗಕ್ಕೆ ಸ್ಥಳದ ಮಹತ್ವದ ಹಾಗೂ ಇತಿಹಾಸ ಗುರುತಿಸಲು ಸಾಧ್ಯವಾಗುತ್ತದೆ. ಕವಿ ಮುದ್ದಣ ಸೇರಿದಂತೆ ಅನೇಕ ಸಾಹಿತಿಗಳ ನಂದಳಿಕೆಯೆ ಮೂಲವಾಗಿದೆ ಎಂದರು.
ಜನಪದ ವಿದ್ವಾಂಸ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ ಕುಮಾರ್ ಎಸ್. ಆರ್. ಮಾತನಾಡಿ ಸತ್ಯಮಾಲೋಕಂದ ಸಿರಿ ಈ ಪುಸ್ತಕದಲ್ಲಿ ಶ್ರೀಮಂತ ತುಳುನಾಡ ಸಂಸ್ಕೃತಿಯನ್ನು ತೆರೆದಿಡಲಾಗಿದೆ. ಕುಂದಾಪುರ ದಿಂದ ಹಿಡಿದು ಉಜಿರೆ ವರೆಗಿನ ಶ್ರೀಮಂತ ತುಳುನಾಡು ಸಿರಿಗಳ ಆರಾಧನೆಯ ಕಥೆಗಳು ಯುವಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕ ಅನಾವರಣ ಮಾಡುವ ಮೂಲಕ ತುಳುನಾಡಿನ ಇತಿಹಾಸವನ್ನು ಮರುಕಳಿಸುವ ಪ್ರಯತ್ನ ಮಾಡಲಾಗಿದೆ. ಎಂದರು.
ಲೇಖಕಿ ಸರಳಾ ಎಸ್. ಹೆಗ್ಡೆ, ಮಾತನಾಡಿ ಪಾರ್ದನಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ . ಅದನ್ನು ಕ್ರೋಢೀಕರಿಸಿ ಪುಸ್ತಕ ಬರೆಯಲಾಗಿದೆ ಎಂದರು.
ಕವತ್ತಾರು ವಿಷ್ಣು ರಾಜ ಭಟ್ , ದೇವಸ್ಥಾನದ ತಂತ್ರಿ ಹರೀಶ್ ತಂತ್ರಿ ಮಾತನಾಡಿ ಶುಭಹಾರೈಸಿದರು.
ಸಭೆಯಲ್ಲಿ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೆಸರ ಚಾವಡಿ ಅರಮನೆಯ ಸುಂದರರಾಮ ಹೆಗ್ಡೆ ಉಪಸ್ಥಿತರಿದ್ದರು, ಜಯಂತಿ ಶೆಟ್ಟಿ ಪ್ರಾರ್ಥಿಸಿದರು. ನಂದಳಿಕೆ ಸುಹಾಸ್ ಹೆಗ್ಡೆ ಸ್ವಾಗತಿಸಿದರು. ಸೀತಾರಾಂ ಭಟ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.