



ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆಯಲ್ಲಿ ವಿಜ್ಞಾನ ಮೇಳ , ಗಣಿತ ,ಸಂಸ್ಕೃತಿ ಜ್ಞಾನ ಮಹೋತ್ಸವ ಪೂರ್ವ ಸಿದ್ಧತಾ ಬೈಠಕ್ ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಕರ ವೃತ್ತಿ ಹೂವಿನ ಹಾಗೆ, ಹೂ ಹೇಗೆ ತನ್ನ ಸೌಂದರ್ಯ ದಿಂದ , ಸುವಾಸನೆಯಿಂದ ಎಲ್ಲರನ್ನೂ ತನ್ನೆಡಗೆ ಸೆಳೆಯುತ್ತದೆಯೋ ಶಿಕ್ಷಕ ತನ್ನ ವೃತ್ತಿ ಧರ್ಮದಿಂದ ಎಲ್ಲ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗುತ್ತಾರೆ .ನಿರಂತರವಾಗಿ ಶಿಕ್ಷಕರು ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಪ್ರತಿಭೆ ಅರಳಿಸಬೇಕು ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧೆ ಯ ಪೂರ್ವ ಸಿದ್ಧತಾ ಬೈಠಕ್ ಇದಾಗಿದೆ. ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಸಂಚಾಲಕರು ಶ್ರೀ ರಮೇಶ ನಾಯಕ ತೆಕ್ಕಟ್ಟೆ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಖಜಾಂಚಿ ಶ್ರೀ ಚಂದ್ರಶೇಖರ ಪಡಿಯಾರ್ , ಮುಖ್ಯೋಪಾಧ್ಯಾಯರು ಶ್ರೀ ವಿಷ್ಣುಮೂರ್ತಿ ಭಟ್ , ಶ್ರೀ ಮಹೇಶ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ , ಮತ್ತು ಶ್ರೀ ರಾಮಪ್ರಸಾದ ಭಟ್ ಸದಸ್ಯರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು. ಜಿಲ್ಲಾ ವಿಜ್ಞಾನ ಪ್ರಮುಖ್ ಶ್ರೀಮತಿ ಸಂಧ್ಯಾ ಭಟ್ ತೆಕ್ಕಟ್ಟೆ ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಕುರಿತು , ಶ್ರೀಮತಿ ಜ್ಯೋತಿ ಸಿದ್ಧಾಪುರ ಜಿಲ್ಲಾ ಗಣಿತ ಪ್ರಮುಖ್ ಜಿಲ್ಲಾ ಮಟ್ಟದ ಗಣಿತ ಸ್ಪರ್ಧೆಯ ಕುರಿತು , ಕುಮಾರಿ ಜ್ಯೋತಿ ಎಳ್ಳಾರೆ ಜಿಲ್ಲಾ ಸಂಸ್ಕೃತಿ ಜ್ಞಾನ ಪ್ರಮುಖ್ ಜಿಲ್ಲಾ ಮಟ್ಟದ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯ ಯೋಜನೆಯ ಕುರಿತು ಮತ್ತು ಸ್ಪರ್ಧೆಯ ಪಠ್ಯಕ್ರಮದ ಮಾಹಿತಿಯನ್ನು ನೀಡಿದರು ಅನಂತರ ಸಭೆಯ ಅನುಮತಿಯೊಂದಿಗೆ ನಿಗದಿಪಡಿಸಿದರು . ಪೂರ್ವ ಸಿದ್ಧಾತಾ ಬೈಠಕ್ ನಲ್ಲಿ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ 11 ಸಂಸ್ಥೆಯ 12 ವಿಜ್ಞಾನ ಮತ್ತು ಗಣಿತ ಶಿಕ್ಷಕರು ಭಾಗವಹಿಸಿದರು.ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಗಸ್ಟ್ 12 ಶನಿವಾರ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಯಲ್ಲಿ ಜಿಲ್ಲಾ ಮಟ್ಟದ ಶಿಶುವರ್ಗ ಮತ್ತು ಬಾಲವರ್ಗದ ಸ್ಪರ್ಧೆ ಯನ್ನು , ಆಗಸ್ಟ್ 26 ಶನಿವಾರ ಕಿಶೋರ್ ವರ್ಗ ಮತ್ತು ತರುಣ ವರ್ಗ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.