



ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಅವರು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ ಪ್ರವೇಶ ಪಡೆದಿರುತ್ತಾರೆ.
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‍ನಲ್ಲಿ 720ರಲ್ಲಿ 710 ಅಂಕ ಪಡೆದು ಜನರಲ್ ಮೆರಿಟ್‍ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದು ಏಮ್ಸ್‍ನಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಹೊಸದಿಲ್ಲಿಯ ಏಮ್ಸ್‍ನಲ್ಲಿ ಸೀಟು ಪಡೆಯುವುದು ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಕನಸಾಗಿರುತ್ತದೆ. ಹೊಸದಿಲ್ಲಿಯ ಏಮ್ಸ್‍ನಲ್ಲಿ ತಮ್ಮ ವಿದ್ಯಾರ್ಥಿಗಳು ಸೀಟು ಪಡೆಯಬೇಕು ಎಂಬುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಆಕಾಂಕ್ಷೆಯಾಗಿರುತ್ತದೆ.
ನೀಟ್‍ನಲ್ಲಿ 720ರಲ್ಲಿ 702 ಅಂಕ ಪಡೆದು ಜನರಲ್ ಮೆರಿಟ್‍ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 180ನೇ ರ್ಯಾಂಕ್ ಪಡೆದ ಶಾಮಿಕ್ ಅಬ್ದುಲ್ ರೆಹಮಾನ್ ಪಾಂಡಿಚೇರಿಯ ಜಿಪ್ಮರ್‍ನಲ್ಲಿ ಸೀಟು ಪಡೆದರೆ, 700 ಅಂಕ ಪಡೆದು ಜನರಲ್ ಮೆರಿಟ್‍ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 307ನೇ ರ್ಯಾಂಕ್ ಪಡೆದ ಅರ್ನವ್ ಕಾಮತ್ ಏಮ್ಸ್ ಭುವನೇಶ್ವರ, 680 ಅಂಕ ಪಡೆದು ಹೇಮಚಂದ್ರ ಸಿ. ಏಮ್ಸ್ ಮಂಗಳಗಿರಿಯಲ್ಲಿ ಸೀಟು ಪಡೆದುಕೊಂಡಿದ್ದಾರೆ.
ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದ ಸೀಟು ಹಂಚಿಕೆ ಮಾಡಲಾಗಿದ್ದು, ರಾಜ್ಯ ಮಟ್ಟದ ಸೀಟು ಹಂಚಿಕೆಯು ಇನ್ನಷ್ಟೇ ಆಗಬೇಕಿದೆ.
ಹೊಸದಿಲ್ಲಿಯ ಏಮ್ಸ್ ಸೇರಿದಂತೆ ಏಮ್ಸ್‍ನ ದೇಶದ ಬೇರೆ ಬೇರೆ ಭಾಗದಲ್ಲಿರುವ ಇನ್ನಿತರ ಶಾಖೆಗಳು, ಪಾಂಡಿಚೇರಿಯ ಜಿಪ್ಮರ್ (ಜೆಐಪಿಎಂಇಆರ್), ಬಿಎಂಸಿ, ಕೆಎಂಸಿ ಸೇರಿದಂತೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಕ್ಸ್‍ಪರ್ಟ್‍ನ ಶೇ. 45ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ವೈದ್ಯಕೀಯ ಪ್ರವೇಶ ಪಡೆಯುತ್ತಾರೆ. ಒಂದು ಶಿಕ್ಷಣ ಸಂಸ್ಥೆಯಿಂದ ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಹಾಗೂ ಕಲಿಯುವಿಕೆಗೆ ಪೂರಕ ವಾತಾವರಣದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.