



ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಚಿಂತ್ಯಾ ಅರವಿಂದ್ ರೈ ಐಐಟಿ ಮುಂಬಯಿ ಹಾಗೂ ಮಧುಪ್ರಿಯಾ ಕೆ.ಎಂ. ಐಐಟಿ ರೂರ್ಕಿಯಲ್ಲಿ ಜನರಲ್ ಮೆರಿಟ್‍ನಲ್ಲಿ ಸೀಟು ಪಡೆದುಕೊಂಡಿದ್ದಾರೆ.
ಎಂಜಿನಿಯರಿಂಗ್ ಕಾಲೇಜಿನ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯ ಫಿಸಿಕ್ಸ್‍ನಲ್ಲಿ ಅಚಿಂತ್ಯ ಅರವಿಂದ್ ರೈ 100 ಪರ್ಸೆಂಟೈಲ್ ಪಡೆದು, ಒಟ್ಟು 99.87 ಪರ್ಸೆಂಟೈಲ್ ಹಾಗೂ ಜೆಇಇ ಎಡ್ವಾನ್ಸ್ ಪರೀಕ್ಷೆಯಲ್ಲಿ ಜನರಲ್ ಮೆರಿಟ್‍ನಲ್ಲಿ 1883ನೇ ರ್ಯಾಂಕ್ ಪಡೆದಿದ್ದರು. ಹಾಗೆಯೇ ಮಧುಪ್ರಿಯಾ ಕೆ. 99.71 ಪರ್ಸೆಂಟೈಲ್ ಪಡೆದು, ಎಡ್ವಾನ್ಸ್ ಪರೀಕ್ಷೆಯಲ್ಲಿ ಜನರಲ್ ಮೆರಿಟ್‍ನಲ್ಲಿ 2922ನೇ ರ್ಯಾಂಕ್ ಪಡೆದಿದ್ದರು.
ತಿರುವನಂತಪುರಂನ ಐಐಎಸ್‍ಇಆರ್ ಸಂಸ್ಥೆಗೆ ಎಕ್ತಾ ಕೆ. ಶೇಟ್ ಹಾಗೂ ವಿಶಾಖಪಟ್ಟಣಂನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಆ್ಯಂಡ್ ಎನರ್ಜಿಗೆ ಮೇಧ ಪ್ರವೇಶ ಪಡೆದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.