



ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತರಾಮಮ್ ಮಂಡಿಸಿದ ಕೇಂದ್ರೀಯ ಬಜೆಟ್ ನಲ್ಲಿ ಯಾವುದು ಅಗ್ಗ ಯಾವುದು ತುಟ್ಟಿ ಯಾಗಿರಲಿದೆ ಇಲ್ಲಿ ನೋಡಿ
ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿದಂತೆ, ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು ಅಗ್ಗವಾಗಲಿವೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ರತ್ನದ ಕಲ್ಲುಗಳ ಮೇಲಿನ ಸೀಮಾ ಸುಂಕವನ್ನು ಶೇ 5ಕ್ಕೆ ಇಳಿಸಲಾಗಿದೆ. ಆ ನಂತರದಲ್ಲಿ 350ಕ್ಕೂ ಹೆಚ್ಚು ಸೀಮಾ ಸುಂಕ ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ
ಅಗ್ಗ:
– ಬಟ್ಟೆ -ಎಲೆಕ್ಟ್ರಾನಿಕ್ ವಸ್ತುಗಳು – ಆಭರಣ ವಸ್ತುಗಳು – ಕೈಗಡಿಯಾರಗಳು – ಚರ್ಮದ ವಸ್ತುಗಳು – ಕೃಷಿ ಉಪಕರಣಗಳು – ರತ್ನದ ಕಲ್ಲುಗಳು ಮತ್ತು ವಜ್ರಗಳು – ತದ್ರೂಪಿ ಅಥವಾ ಅನುಕರಣೆ ಆಭರಣ – ಮೊಬೈಲ್ ಫೋನ್‌ಗಳು – ಮೊಬೈಲ್ ಫೋನ್ ಚಾರ್ಜರ್‌ಗಳು – ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು – ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳು – ಸ್ಟೀಲ್ ಸ್ಕ್ರ್ಯಾಪ್
ದುಬಾರಿ – ಎಲ್ಲ ಆಮದು ವಸ್ತುಗಳು – ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ – ಛತ್ರಿಗಳ ಮೇಲಿನ ಸುಂಕ ಹೆಚ್ಚಳ...
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.