



ಬೆಂಗಳೂರು; ಅತಿ ವೇಗದಲ್ಲಿ ವಾಹನ ಚಲಾಯಿಸುವುದು - ಐಎಂವಿ ಕಾಯ್ದೆ ಸೆಕ್ಷನ್ 112 ಮತ್ತು 183 (1) (i) ಅಡಿಯಲ್ಲಿ, 2W/3W/LMV-1000 ಇತರೆ ವಾಹನಗಳಿಗೆ 2 ಸಾವಿರ ದಂಡ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು - ಐಎಂವಿ ಕಾಯ್ದೆ ಸೆಕ್ಷನ್ 184 (ಎ) - ರೂ.1,000 ದಂಡ ಎಡಭಾಗದಿಂದ ವಾಹನವನ್ನು ಓವರ್ ಟೇಕ್ ಮಾಡುವುದು - ಐಎಂವಿ ಕಾಯ್ದೆ ಸೆಕ್ಷನ್ 184 (ಡಿ) ಅಡಿಯಲ್ಲಿ ಕೇಸ್, ರೂ.1,000 ದಂಡ ಏಕ ಮುಖ ಸಂಚಾರ ರಸ್ತೆಯಲ್ಲಿ ವಿರುದ್ಧವಾಗಿ ವಾಹನ ಚಲಾಯಿಸುವುದು - ಐಎಂವಿ ಕಾಯ್ದೆ ಸೆಕ್ಷನ್ 184 (ಇ) ಅಡಿಯಲ್ಲಿ ರೂ.1,000 ದಂಡ ವಿಧಿಸಲಾಗುತ್ತದೆ. ಮದ್ಯ ಪಾನದ ಅಮಲಿನಲ್ಲಿ ವಾಹನ ಚಲಾಯಿಸುವುದು - ಐಎಂವಿ ಕಾಯ್ದೆ ಸೆಕ್ಷನ್ 185 ಅಡಿಯಲ್ಲಿ ಪ್ರಕರಣ ದಾಖಲಿಸಿ, ಕೋರ್ಟ್ ವಿಲೇವಾರಿಗೆ ನೀಡಲಾಗುತ್ತದೆ. ವಿಮೆ ಮಾಡಿಸದೇ ವಾಹನ ಚಲಾಯಿಸುವುದು - ಐಎಂವಿ ಕಾಯ್ದೆ ಸೆಕ್ಷನ್ 146 ಮತ್ತು 196 ಅಡಿಯಲ್ಲಿ ಕೇಸ್ - 2W / 3W ಗಳಿಗೆ ರೂ.1,000 ದಂಡ, LMVಗಳಿಗೆ ರೂ.2,000 ಹಾಗೂ ಇತರೆ ವಾಹನಗಳಿಗೆ ರೂ.4 ಸಾವಿರ ದಂಡ ನೋಂದಣಿ ಮಾಡಿಸದೇ ವಾಹನ ಚಲಾಯಿಸುವುದು - ಐಎಂವಿ ಕಾಯ್ದೆ ಸೆಕ್ಷನ್ 39 ಮತ್ತು 192 (1 ) ಅಡಿಯಲ್ಲಿ ಕೇಸ್ - 2W, 3W ರೂ.2 ಸಾವಿರ, LMVಗಳಿಗೆ ರೂ.3 ಸಾವಿರ ಹಾಗೂ ಇತರೆ ವಾಹನಗಳಿಗೆ 5 ಸಾವಿರ ದಂಡ ವಿಧಿಸಲಾಗುತ್ತದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.