logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ವ್ಯವಹಾರದಲ್ಲಿನ ಅಡೆತಡೆಗಳ ನಿವಾರಣೆಯ ಕುರಿತು ಮೈಕಲ್ ಡಿಸೋಜಾರಿಂದ ವಿಚಾರ ಸಂಕಿರಣ

ಟ್ರೆಂಡಿಂಗ್
share whatsappshare facebookshare telegram
29 May 2023
post image

ಮಂಗಳೂರು: ರಚನಾ, ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಲಬ್‌ನಲ್ಲಿ 28 ಮೇ ಸಂಜೆ 7 ಗಂಟೆಗೆ ಸದಸ್ಯರ ಸಭೆಯನ್ನು ನಡೆಸಲಾಯಿತು.

ಎನ್‌ಆರ್‌ಐ ಉದ್ಯಮಿ ಶ್ರೀ ಮೈಕೆಲ್ ಡಿಸೋಜಾ ಮುಖ್ಯ ಅತಿಥಿ ಮತ್ತು ಪ್ರಮುಖ ಭಾಷಣಕಾರರಾಗಿದ್ದರು.

ಶ್ರೀ ಮೈಕಲ್ ಡಿಸೋಜರವರು ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ, ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ ಮಾತನಾಡಿದರು. ಇವರು ತಮ್ಮ ಸಣ್ಣ ವಯಸ್ಸಿನಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ ಯುಎಇಯಲ್ಲಿನ ವ್ಯಾಪಾರ ಸಾಮರ್ಥ್ಯದ ಬಗ್ಗೆ ಮಾರುಕಟ್ಟೆ ಅಧ್ಯಯನವನ್ನು  ನಡೆಸಿ, ಸ್ಥಳೀಯರ ಸಹಾಯದಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ, ವ್ಯಾಪಾರದಲ್ಲಿ ಹೂಡಿಕೆ ಮಾಡಿದರು. ನಂಬಿಗಸ್ತ ಜನರು ದೊಡ್ಡ ಪ್ರಮಾಣದಲ್ಲಿ ವಂಚಿಸಿದಾಗ ಧೈರ್ಯಗುಂದದೆ, ವ್ಯಾಪಾರವನ್ನು ಪುನರಾಂಭಿಸಿದರು. ಅವರ ಧರ್ಮಪತ್ನಿ ಶ್ರೀಮತಿ ಫ್ಲೇವಿಯವರ ಸಹಾಯದಿಂದ ಮುನ್ನಡೆದುದರ ಮಾತನಾಡಿದರು. ಸಭಿಕರಲ್ಲಿ ನೆರೆದಿದ್ದ ಯುವ ಉದ್ಯಮಿಗಳಿಗೆ ‘ನಿಮ್ಮ ವ್ಯವಹಾರವು ಆರ್ಥಿಕ ಪಾರದರ್ಶಕತೆಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ, ನಿಮ್ಮ ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆ ವ್ಯವಹಾರದಲ್ಲಿ ಯಶಸ್ಸಿಗೆ ಪ್ರಮುಖವಾಗಿದೆ. ನಿಮ್ಮ ವ್ಯವಹಾರ ವಿಫಲವಾದರೂ ನಿಮ್ಮ ಹೆಸರು ಖ್ಯಾತಿಯಲ್ಲಿರಬೇಕು’ ಎಂಬ ಸಲಹೆ ನೀಡಿದರು.

ರಚನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿ, ಉಪಾಧ್ಯಕ್ಷ ಸಿಎ ರುಡಾಲ್ಫ್ ರೋಡ್ರಿಗಸ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯರಾದ ಶ್ರೀ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಶ್ರೀಮತಿ ಯುಲಾಲಿಯಾ ಡಿಸೋಜಾ ವಂದಿಸಿದರು. ಭೋಜನದೊಂದಿಗೆ ಸಭೆ ಮುಕ್ತಾಯವಾಯಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.