



ಹೆಬ್ರಿ : 1997 ರಲ್ಲಿ ಪ್ರಥಮವಾಗಿ ಸ್ಥಾಪನೆಯದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯು ಅನುಭವಗಳನ್ನು ಸಾಮಾಜಿಕವಾಗಿ ತೊಡಗಿಸಿ ಸಮಾಜವನ್ನು ಕಟ್ಟುವ ಕೆಲಸ ಮಾಡಲಿದೆ. ನಾಯಕತ್ವ ವನ್ನು ಹೊಂದಿ ನಾವೆಲ್ಲ ವಿಶಿಷ್ಟವಾದ ವ್ಯಕ್ತಿಗಳಾಗಬೇಕು. ಸಮಾಜದ ಒಳಿತಿಗಾಗಿ ಸಾಮಾಜಿಕ ಬದ್ಧತೆಯನ್ನು ತೋರಿಸ ಬೇಕು. ಹೆಬ್ರಿಯಲ್ಲೂ ಸಂಸ್ಥೆಯು ಅತ್ಯುತ್ತಮ ಕೆಲಸ ಮಾಡಲಿದೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದ ರಾವ್ ಕೇದಿಗೆ ಹೇಳಿದರು.
ಅವರು ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಭಾನುವಾರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹೆಬ್ರಿ ಘಟಕದ ನೂತನ ಅಧ್ಯಕ್ಷ ಪ್ರಕಾಶ ಕುಮಾರ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಸಂಸ್ಥೆಯ ನೇತೃತ್ವದಲ್ಲಿ ನಿರ್ದೇಶಕ ಚಿತ್ರ ಕುಮಾರ್ ಪದ ಪ್ರಧಾನ ನೆರವೇರಿಸಿ ಹೆಬ್ರಿ ಘಟಕದ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಕುಮಾರ್ ಶೆಟ್ಟಿ ಯವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ನಿಯಮ ದಂತೆ 40ವರ್ಷ ಮೇಲ್ಪಟ್ಟ ಸುಮಾರು 34 ಮಂದಿ ಪೂರ್ವಾಧ್ಯಕ್ಷರನ್ನು ಘಟಕಕ್ಕೆ ಬರಮಾಡಿಕೊಳ್ಳಲಾಯಿತು. ಉಡುಪಿ ಎಸ್ ಸಿ. ಐ ಸಂಸ್ಥೆಯ ಅಧ್ಯಕ್ಷ ಎನ್. ಜಿ. ಸುಕುಮಾರ್, ಕಾರ್ಯದರ್ಶಿ ಶಿವಾನಂದ ಶೆಟ್ಟಿಗಾರ್, ಪೂರ್ವಾಧ್ಯಕ್ಷ ನವೀನ್ ಅಮೀನ್, ಸಂಸ್ಥೆಯ ನಿರ್ದೇಶಕ ಪ್ರಮೋದ್ ಕುಮಾರ್, ಹೆಬ್ರಿ ಎಸ್ ಸಿ ಐ ಘಟಕದ ನೂತನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.