



ಮಂಗಳೂರು: ನಗರದ ಹೊರವಲಯದ ಉಳ್ಳಾಲಬೈಲುನಲ್ಲಿರುವ ಸದಾಶಿವ ಆಚಾರ್ಯ ಎಂಬುವರಿಗೆ ಏಳು ಲಕ್ಷ ರೂ. ಮೊತ್ತದ ಬಿಲ್ ನೀಡಿರುವ ಮೆಸ್ಕಾಂ ಕ್ರಮ ಜನರ ತೀವ್ರ ಟೀಕೆಗೆ ಗುರಿಯಾಗಿದೆ.
ಮೀಟರ್ ರೀಡರ್ ದೋಷದಿಂದ 7,70,071 ರೂ. ಮೊತ್ತದ ಬಿಲ್ ಬಂದಿದೆ ಎನ್ನಲಾಗುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಮೆಸ್ಕಾಂ ಮೀಟರ್ ರೀಡರ್ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. 99,338 ಯುನಿಟ್ ವಿದ್ಯುತ್ ಬಳಸಿದ್ದೀರಿ ಎಂದು ಮೀಟರ್ ರೀಡರ್ ಹೇಳಿದ್ದಾರೆ.
ತಕ್ಷಣ ಮೆಸ್ಕಾಂ ಉಪ ವಿಭಾಗದ ಕಚೇರಿ ಸಂಪರ್ಕಿಸಿದ ಆಚಾರ್ಯ ಅವರ ಬಳಿ ಮೀಟರ್ ರೀಡರ್ ಎಡವಟ್ಟನ್ನು ಮೆಸ್ಕಾಂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ತಪ್ಪು ಸರಿಪಡಿಸಿ ಹೊಸದಾಗಿ 2,833 ರೂ. ಮೊತ್ತದ ವಿದ್ಯುತ್ ಬಿಲ್ ಅಧಿಕಾರಿಗಳು ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.