logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪುರಸಭಾ ಸೊತ್ತುಗಳನ್ನು ರಕ್ಷಿಸುವಲ್ಲಿ ಪುರಸಭಾ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ: ಅಶ್ಪಾಕ್ ಅಹ್ಮದ್

ಟ್ರೆಂಡಿಂಗ್
share whatsappshare facebookshare telegram
23 Dec 2021
post image

ಕಾರ್ಕಳ:ಪುರಸಭಾ ಸೊತ್ತುಗಳನ್ನು ರಕ್ಷಿಸುವಲ್ಲಿ ಪುರಸಭಾ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುತ್ತಿರುವ ಮುಂಡ್ಲಿ ಜಲಾಶಯ ದ ನೀರು ಸಂಗ್ರಾಹಾರಕ್ಕೆ ಹಾಕಿದ್ದ ಸುಮಾರು125 ಕಿಲೋ ಭಾರದ 160 ಗೇಟುಗಳು ಎನಾಯಿತು.ಮಸ್ತಕಾಬೀಷೇಕ ಸಂದರ್ಭದಲ್ಲಿ ಪುರಸಭೆ ಖರೀದಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಒವರ್ ಹೆಡ್ ಟ್ಯಾಂಕ್, ನೀರು ಸರಬರಾಜು ಕೇಂದ್ರಗಳಲ್ಲಿ ಅಳವಡಿಸಿದ ಬಿಡಿಭಾಗಗಳು ಎಲ್ಲಿ ಇವೇ, ಏನಾಗಿದೆ ಎಂದು ವಿಪಕ್ಷ ಮುಖಂಡ ಅಶ್ಪಾಕ್ ಅಹ್ಮದ್ ಪ್ರಶ್ನಿಸಿದರು ಅವರು ಕಾರ್ಕಳ ಪುರಸಭಾ ಮಾಸಿಕ ಸಭೆಯಲ್ಲಿ ಮಾತನಾಡುತ್ತಿದ್ದರು ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿಯವರು ಈ ಬಗ್ಗೆ ಪೋಲೀಸ್ ಇಲಾಖೆಗೆ ದೂರು ನೀಡಿದ್ದು ಪುರಸಬೆಯ ನೀರುಸರಬರಾಜು ವಿಭಾಗದ ಅನಿಲ್ ಎಂಬುವರನ್ನು ಬಂದಿಸಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಬೆಗೆ ತಿಳಿನಿದರು ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಳಿಕಾಂಬ ಬಳಿಯ ನೂತನ ಉದ್ಯಾನವನಕ್ಕೆ ಮಾಜಿ ಪುರಸಭಾ ಅಧ್ಯಕ್ಷ, ದಿವಂಗತ ಪ್ರದೀಪ್ ಕೋಟ್ಯಾನ್ ಹೆಸರಿಡಬೇಕೆಂದು ಪುರಸಭಾ ಸದಸ್ಯ ಶುಭದ ರಾವ್ ಆಗ್ರಹಿಸಿದರು ಕಳೆದ ಸಭೆಯಲ್ಲಿ ಅಂಗಡಿ ಮಳಿಗೆಗಳ ಬಾಡಿಗೆ ಕಲೆಕ್ಷನ್ ನಲ್ಲಿ ಅವ್ಯವಹಾರ ನಡೆದಿದೆ ನೇರವಾಗಿ ಪುರಸಭಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಮಾಡಿದ್ದು ಮುಂದಿನ ಸಭೆಯಲ್ಲಿ ಅಂತಹ ಅಧಿಕಾರಿಗಳ ಸಿ ಡಿ ಬಿಡುಗಡೆ ಮಾಡುತ್ತೇನೆ ಎಂದು ವಿಪಕ್ಷ ಸದಸ್ಯ ಸೋಮನಾಥ ನಾಯ್ಕ ಗಂಭೀರ ಆರೋಪ ಮಾಡಿದ್ದರು ಅದನ್ನು ಈ ಸಭೆಯಲ್ಲಿ ಅದನ್ನು ಸಾಬೀತುಪಡಿಸಬೇಕೆಂದು ಆಡಳಿತ ಪಕ್ಷದ ಸದಸ್ಯ ಯೋಗಿಶ್ ದೇವಾಡಿಗ ಪಟ್ಟು ಹಿಡಿದರು. ಈ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು ಸೋಮನಾಥ ನಾಯ್ಕರವರು ಮಾತನಾಡಿ ಕಳೆದ ಸುಮಾರು ಒಂದು ವರ್ಷದಿಂದ ಮಾಹಿತಿ ಹಕ್ಕಿನಡಿಯಲ್ಲಿ ಹಲವಾರು ಮಾಹಿತಿಯನ್ನು ಕೇಳಿದ್ದೆ ಆದರೆ ಅಧಿಕಾರಿಗಳು ಇದುವರೆಗೆ ಮಾಹಿತಿ ನೀಡಿರುವುದಿಲ್ಲ ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಪುರಾವೆಯಲ್ಲವೇ..ಇಲ್ಲದಿದ್ದರೆ ಯಾಕೆ ಮಾಹಿತಿ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರುಗಳಾದ ಯೋಗಿಶ್ ದೇವಾಡಿಗ, ಪ್ರದೀಪ್ ಮಾರಿಗುಡಿ, ಪ್ರಸನ್ನ ರವರು ತಾವು ಆರೋಪ ಮಾಡಿದ ಆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿ ಎಂದರು ಕೆಲವೊಮ್ಮೆ ವರ್ಷಾನುಗಟ್ಟಲೆ ಯ ಮಾಹಿತಿಯನ್ನು ಕೇಳಿದಾಗ ನೀಡು ವಿಳಂಬ ವಾಗುವುದು ಸಹಜ ಆಗ ಕಾಲಾವಕಾಶ ದ ಅವಶ್ಯಕತೆ ಇರುತ್ತದೆ ತಾವು ಸುಮಾರು 20 ವರ್ಷಗಳ ಮಾಸಿಕ ಸಭೆಗಳ ವರದಿಯನ್ನು ನೀಡಲು ಸಮಯ ಅವಕಾಶ ಬೇಕಾಗಿದೆ‌ ಎಂದು ಮುಖ್ಯಾಧಿಕಾರಿ ಸಮಜಾಯಿಸಿ ನೀಡಿದರು ಎಸ್ ಸಿ ಎಸ್‌ ಟಿ ಫಂಡ್ ಗಳನ್ನು ಅಧ್ಯಕ್ಷರು ಬೇರೆ ಕೆಲಸಗಳಿಗೆ ವಿನಿಯೋಗಿಸುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅದ್ಯಕ್ಷ ರು ಎಸ್ ಸಿ ಎಸ್ ಟಿ ನಿಧಿ ಯನ್ನು ಯಾವುದೇ ಕಾರಣ ಕ್ಕೂ ಬೇರೆ ಕೆಲಸ ಗಳಿಗೆ ವಿನಿಯೋಗ ಮಾಡಲು ಸಾಧ್ಯವಿಲ್ಲ. ಸಂಬಂಧಿಸಿದ ಕೆಲಸಕ್ಕೆ ಮಾತ್ರ ವಿನಿಯೋಗಿಸಬಹುದು ಪುರಸಭೆಯಲ್ಲಿ ಅಧ್ಯಕ್ಷರೇ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು

ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಮಲ್ಯ ಉಪಸ್ಥಿತರಿದ್ದರು ಪುರಸಭಾ ಸದಸ್ಯರುಗಳಾದ ವಿನ್ನಿ ಬೋಲ್ಡ್ ಮೆಂಡೊನ್ಸ, ಸೋಮನಾಥ ನಾಯ್ಕ್, ರೆಹಮತ್ ಎನ್ ಶೇಖ್, ಪ್ರತಿಮಾ, ಸೀತಾರಾಮ, ನಳಿನಿ ಆಚಾರ್ಯ, ಹರೀಶ್ ದೇವಾಡಿಗ, ಪ್ರಶಾಂತ ಕೋಟ್ಯಾನ್, ನೀತಾ ಆಚಾರ್ಯ. ಶೋಭಾ ದೇವಾಡಿಗ, ಮಮತಾ, ಸುನೀತಾ ಶೆಟ್ಟಿ, ಪ್ರಭಾ ಕಿಶೋರ್, ಮೀನಾಕ್ಷಿ ಗಂಗಾದರ್ ಪ್ರವೀಣ್ ಚಂದ್ರ ಶೆಟ್ಟಿ , ನಾಮ ನಿರ್ದೇಶಿತ ಸದಸ್ಯರಾದ ಅವಿನಾಶ್ ಶೆಟ್ಟಿ, ಸಂತೋಷ್ ರಾವ್, ಪ್ರಸನ್ನ, ಸಂಧ್ಯಾ ಮಲ್ಯ , ಅಶೋಕ್ ಸುವರ್ಣ ಚರ್ಚೆಯಲ್ಲಿ ಭಾಗವಹಿಸಿದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.