



ಮುಂಬಯಿ: ಕ್ರೂಸ್ ಹಡಗಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕ್ರೋಸ್ ನ ಮೇಲೆ ದಾಳಿ ನಡೆಸಿದ್ದು, 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪಾರ್ಟಿ ಮಾಡುತ್ತಿದ್ದ ಸ್ಥಳದಿಂದ ಕೊಕೇನ್, ಹಶೀಶ್ ಹಾಗೂ ಎಂಡಿಎಂಎ ಸೇರಿ ಹಲವು ರೀತಿಯ ಮಾದಕ ದ್ರವ್ಯಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದಿದ್ದಾರೆ. ರೇವ್ ಪಾರ್ಟಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದೆ.ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಕಾರ್ಡೆಲಿಯಾ ಕ್ರೂಸ್ ಲೈನರ್‌ನ “ದಿ ಎಂಪ್ರಸ್’ ಹಡಗಿನೊಳಗೆ ಡ್ರಗ್ಸ್ ಪಾರ್ಟಿ ನಡೆಸಲಾಗುತ್ತಿತ್ತು. ಈ ಹಡಗು ಮುಂಬೈನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಸಮುದ್ರ ತೀರ ಬಿಟ್ಟು ಸ್ವಲ್ಪ ಸಮಯದಲ್ಲೇ ಪಾರ್ಟಿ ಆರಂಭಿಸಲಾಗಿದೆ. ಬಂಧಿತರನ್ನು ಅ 3 ರಂದು ಬಾಂಬೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.