logo
WhatsApp Image 2026-04-02 at 14.46.04.jpeg
hindalco everlast.jpeg

ಶಕಲಕ ಬೂಮ್ ಬೂಮ್' ತುಳು ಸಿನಿಮಾ ಬಿಡುಗಡೆಗೆ ಇಲ್ಲೋಕ್ಕೆಲ್ ಸಿನಿಮಾ ಅಡ್ಡಿ: ನಗರದಲ್ಲಿ ನಿರ್ಮಾಪಕರ ಬೇಸರದ ಹೇಳಿಕೆ

ಟ್ರೆಂಡಿಂಗ್
share whatsappshare facebookshare telegram
10 Oct 2022
post image

ಉಡುಪಿ: ಶಕಲಕ ಬೂಮ್ ಬೂಮ್' ತುಳು ಸಿನೆಮಾವನ್ನು ಡಿ.16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದ್ದು, ಈ ಮಧ್ಯೆ ಇಲ್ಲೋಕ್ಕೆಲ್' ತುಳು ಸಿನೆಮಾ ತಂಡ ಅದೇ ದಿನಾಂಕದಂದೇ ತಮ್ಮ ಸಿನೆಮಾ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ಗೊಂದಲ ಮಯ ವಾತಾವರಣ ಸೃಷಿಸಿದೆ ಎಂದು ಶಕಲಕ ಬೂಮ್ ಬೂಮ್ ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಹೇಳಿದ್ದಾರೆ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರರ್, ಥ್ರಿಲ್ಲರ್, ಕಾಮಿಡಿ ಹೊಂದಿರುವ ಹೊಸತನದಿಂದ ಕೂಡಿದ `ಶಕಲಕ ಬೂಮ್ ಬೂಮ್' ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಥಮ ನವರಾತ್ರಿಯಂದು ಘೋಷಿಸಲಾಗಿತ್ತು. ಆದರೆ ಅ.21ರಂದು ಬಿಡುಗಡೆ ದಿನಾಂಕ ನಿಗದಿ ಪಡಿಸಿದ್ದ ಇಲ್ ಒಕ್ಕೆಲ್ ಸಿನೆಮಾ ತಂಡವು ಅನಿರೀಕ್ಷಿತವಾಗಿ ನಮ್ಮ ಚಿತ್ರದ ಬಿಡುಗಡೆಯಂದೇ ಅವರ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಎಂದರು. ಈ ಬಗ್ಗೆ ಎರಡು ತಂಡದವರು ಪರಸ್ಪರ ಮಾತುಕತೆ ನಡೆಸಿದರೂ ಇಲ್ ಒಕ್ಕೆಲ್ ತಂಡ ಒಮ್ಮತಕ್ಕೆ ಬಾರದಿರುವುದರಿಂದ ಉಭಯ ತಂಡಗಳ ಚಿತ್ರಕ್ಕೆ ತೊಂದರೆಯಾಗಿದೆ. ತುಳು ಚಿತ್ರರಂಗ ಬೆಳೆಯಬೇಕಾದರೆ ಈ ರೀತಿಯ ಗೊಂದಲ ಉಂಟಾಗದಂತೆ ವ್ಯವಸ್ಥೆ ಮಾಡುವ ಅಗತ್ಯ ಇದೆ. ಈ ಗೊಂದಲ ನಿವಾರಣೆ ಮಾಡಿ ಪೈಪೋಟಿ ಇಲ್ಲದೆ, ಒಮ್ಮತದಿಂದ ತುಳುಚಿತ್ರ ರಂಗ ನಡೆಸಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಶ್ರೀಶ ಎಳ್ಳಾರೆ ಕಥೆಗಾರ ಸುನೀಲ್ ಕಡ್ತಲ ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.