



ಉಡುಪಿ: ತುಳುನಾಡಿನ ಬಹು ನಿರೀಕ್ಷಿತ ಶಕಲಕ ಬೂಂ ಬೂಂ ಚಲನಚಿತ್ರ ಡಿಸೆಂಬರ್ 16 ರಂದು ಬಿಡುಗಡೆ ಗೊಳ್ಳಲಿದೆ . ಆ ಮೂಲಕ ತೆರೆಗೆ ಬರಲು ಸಿದ್ದವಾಗಿದೆ . ಯು.ಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬರುವ ಈ ಚಲನಚಿತ್ರ ಶ್ರೀಶ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ . ನಿತ್ಯಾನಂದ ನರಸಿಂಗೆ , ಉಮೇಶ್ ಪ್ರಭು ಮಣಿಬೆಟ್ಟು ನಿರ್ಮಾಪಕರಾಗಿದ್ದಾರೆ ಹಾಗೂ ಡಾಲ್ವಿನ್ ಕೊಳಲಗಿರಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರೆ. ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದ್ದು, ಪ್ರಜ್ವಲ್ ಸುವರ್ಣ ಅವರ ಸಂಕಲನವಿದೆ.
ಈ ಚಿತ್ರ ಭಿನ್ನ ಹಾರಾರ್ ಸಸ್ಪೆನ್ಸ್ ಕಥೆಯನ್ನು ಒಳಗೊಂಡಿದ್ದು ತುಳು ಚಿತ್ರ ರಂಗದ ಮೊದಲ ಹಾರಾರ್ ಸಸ್ಪೆನ್ ಚಿತ್ರವಾಗಿದೆ.
ಹೊಟ್ಟೆ ಹುಣ್ಣಾಗಿಸಲು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ತುಂಬಾ ಹಾಸ್ಯದ ಹೊನಲಾಗಿಸಲಿವೆ ಎನ್ನುತ್ತಾರೆ ಚಿತ್ರ ನಿರ್ದೇಶಕ ಶ್ರೀಶ ಎಳ್ಳಾರೆ .. ಚಿತ್ರ ರಲ್ಲಿ ರೂಪಶ್ರೀ ವರ್ಕಾಡಿ, ವಸಂತ್ ಮುನಿಯಾಲ್, ಗಾಡ್ವಿನ್ ಸ್ಪಾರ್ಕಲ್, ಲಕ್ಷಾ ಶೆಟ್ಟಿ, ಸುನಿಲ್ ಕಡ್ತಲ,ಯತೀಶ್ ಪೂಜಾರಿ, ಪ್ರವೀಣ್ ಆಚಾರ್ಯ,ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ಅಭಿನಯಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.