logo
WhatsApp Image 2026-04-02 at 14.46.04.jpeg
hindalco everlast.jpeg

ಶಂಕರನಾರಾಯಣ: ಮೊಬೈಲ್ ಚಾರ್ಜ್ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕ ಸಾವು

ಟ್ರೆಂಡಿಂಗ್
share whatsappshare facebookshare telegram
16 Nov 2022
post image

ಶಂಕರನಾರಾಯಣ:

ಮೊಬೈಲ್ ಚಾರ್ಜ್ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ದೇವಾನಿಯ ಜಿಲ್ಲೆಯ ನಿವಾಸಿ 34 ವರ್ಷದ ವಸಿಷ್ಠ ಪಾಸ್ವಾನ್ ಮೃತದುರ್ದೈವಿ. ಇವರು ಸಂಬಂಧಿಕರಾದ  ವಿಫಿನ್  ಹಾಗೂ  ರಾಮಾನಿ ಎಂಬವರೊಂದಿಗೆ ಕೆಲಸಕ್ಕಾಗಿ ಕುಂದಾಪುರ  ತಾಲೂಕಿನ ಶಂಕರನಾರಾಯಣ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಕೆಲಸ  ಮಾಡಿಕೊಂಡಿದ್ದ ವಸಿಷ್ಠ ಅವರು, ನ.14ರಂದು ರಾತ್ರಿ 8 ಗಂಟೆಗೆ ಅಲ್ಲಿಯೇ ಇದ್ದ  ತೋಟದ  ಪಂಪಸೆಟ್ ಶೆಡ್‌‌ನಲ್ಲಿ ಮೊಬೈಲ್ ಚಾರ್ಜ ಹಾಕಲು ಹೋಗಿದ್ದಾರೆ. ಈ ವೇಳೆ  ಆಕಸ್ಮಿಕವಾಗಿ ಕರೆಂಟ್  ಶಾಕ್ ಹೊಡೆದಿದ್ದು, ಕೂಡಲೇ  ಅವರನ್ನು ಕುಂದಾಪುರ  ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ವಸಿಷ್ಠ ಅವರು ಮೃತಪಟ್ಟಿದ್ಧಾರೆ ಎಂದು ತಿಳಿಸಿದ್ದಾರೆ.. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.